ಜಮ್ಮು ಕಾಶ್ಮೀರದಲ್ಲಿ 4ಜಿ ಇಂಟರ್ನೆಟ್ ಸೇವೆ ಪುನರಾರಂಭ
ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದು ಹಾಕಿದಂದಿನಿಂದ 4G ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಕೇವಲ 2G ಇಂಟರ್ನೆಟ್ ಬಳಸಲು ಅನುಮತಿ ನೀಡಲಾಗಿತ್ತು. ಇದೀಗ 4ಜಿ ಇಂಟರ್ನೆಟ್ ಅನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಮರುಸ್ಥಾಪಿಸಲಾಗಿದೆ ಎಂದು ndtv.com ವರದಿ ಮಾಡಿದೆ.
18 ತಿಂಗಳುಗಳಿಗೂ ಹೆಚ್ಚು ಕಾಲ ಜಮ್ಮು ಕಾಶ್ಮೀರದಲ್ಲಿ 4G ನೆಟ್ ವರ್ಕ್ ಅನ್ನು ತಡೆಹಿಡಿಯಲಾಗಿತ್ತು. ಇದೀಗ ಹೈಸ್ಪೀಡ್ 4G ನೆಟ್ ವರ್ಕ್ ಅನ್ನು ಮರುಸ್ಥಾಪನೆ ಮಾಡಲಾಗಿದೆ ಎಂದು ಕಾಶ್ಮೀರದ ಆಡಳಿತ ವಕ್ತಾರ ರೋಹಿತ್ ಖನ್ಸಾಲ್ ಹೇಳಿಕೆ ನೀಡಿದ್ದಾಗಿ ಮಾಧ್ಯಮ ವರದಿ ತಿಳಿಸಿದೆ.
4G mobile internet services being restored in entire J&K: Rohit Kansal, J&K Principal Secretary (Power & Information). pic.twitter.com/8dIWkbL1JK
— ANI (@ANI) February 5, 2021
Next Story