ನಟ ಮಿಥುನ್ ಚಕ್ರವರ್ತಿ ನಿವಾಸಕ್ಕೆ ಮೋಹನ್ ಭಾಗವತ್ ಭೇಟಿ
ಮುಂಬೈ: ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನಟ ಮಿಥುನ್ ಚಕ್ರವರ್ತಿ ಅವರನ್ನು ಮುಂಬೈನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು.
ಭಾಗವತ್ ಅವರು ಮಂಗಳವಾರ ಬೆಳಗ್ಗೆ ಮುಂಬೈನ ಮಾಧ್ ಪ್ರದೇಶದಲ್ಲಿರುವ ಮಿಥುನ್ ಬಂಗ್ಲೆಗೆ ತೆರಳಿ ಮಾತುಕತೆ ನಡೆಸಿದರು.
ಮುಂಬರುವ ಪ.ಬಂಗಾಳ ಚುನಾವಣೆಯ ಹಿನ್ನೆಲೆಯಲ್ಲಿ ಈ ಇಬ್ಬರ ಭೇಟಿ ಕುತೂಹಲ ಕೆರಳಿಸಿದೆ. ಮಿಥುನ್ ಚಕ್ರವರ್ತಿ ಬಂಗಾಳಿ ನಟರಾಗಿದ್ದು,ದೊಡ್ಡ ಸಂಖ್ಯೆಯ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.
ಮಿಥುನ್ ಈ ಹಿಂದೆ ನಾಗ್ಪುರದಲ್ಲಿ ಆರ್ ಎಸ್ ಎಸ್ ಮುಖ್ಯಸ್ಥ ಭಾಗವತ್ ಅವರನ್ನು ಭೇಟಿಯಾಗಿ ಅಕ್ಸಾ ಬೀಚ್ ಸಮೀಪವಿರುವ ತಮ್ಮ ನಿವಾಸಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದರು.
ಮಿಥುನ್ ಮಾಜಿ ರಾಜ್ಯಸಭಾ ಸದಸ್ಯರಾಗಿದ್ದು, ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನೊಂದಿಗೆ ದೀರ್ಘ ನಂಟು ಹೊಂದಿದ್ದರು. 2016ರಲ್ಲಿ ಆರೋಗ್ಯ ಸಮಸ್ಯೆಯ ಕಾರಣ ನೀಡಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
Next Story