ಪ.ಬಂಗಾಳ: 3 ದಿನದಲ್ಲಿ 300ಕ್ಕೂ ಹೆಚ್ಚು ನಾಯಿಗಳ ಸಾವು
ಕೋಲ್ಕತಾ, ಫೆ.20: ಪಶ್ಚಿಮ ಬಂಗಾಳದ ಬಂಕುರ ಜಿಲ್ಲೆಯ ಬಿಷ್ಣುಪುರ ಗ್ರಾಮದಲ್ಲಿ 3 ದಿನದಲ್ಲಿ 300ಕ್ಕೂ ಹೆಚ್ಚು ಬೀದಿನಾಯಿಗಳು ಸತ್ತಿದ್ದು ಜನತೆ ಆತಂಕಿತರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಂಗಳವಾರ 60, ಬುಧವಾರ 97, ಗುರುವಾರ 45 ಬೀದಿ ನಾಯಿಗಳು ಸಾವನ್ನಪ್ಪಿವೆ. ಮೃತ ನಾಯಿಗಳ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗಾಗಿ ಕೋಲ್ಕತಾದ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ನಾಯಿಗಳಲ್ಲಿ ವೈರಾಣು ಸೋಂಕು ಕಾಣಿಸಿಕೊಳ್ಳುತ್ತಿದ್ದು ನಾಯಿಗಳ ಸಾವಿಗೆ ಇದು ಕಾರಣವಿರಬಹುದು. ಆದರೆ ಈ ಸೋಂಕು ಇತರ ಪ್ರಾಣಿಗಳಿಗೆ ಅಥವಾ ಮಾನವರಿಗೆ ಹರಡುವ ಸಾಧ್ಯತೆಯಿಲ್ಲ. ಜನರು ಆತಂಕಪಡಬೇಕಿಲ್ಲ ಎಂದು ಪಶುವೈದ್ಯರು ಹೇಳಿದ್ದಾರೆ.
Next Story