ಟಿಎಂಸಿ ಪಕ್ಷ ಸೇರ್ಪಡೆಯಾಗಿ ರಾಜಕೀಯ ಇನ್ನಿಂಗ್ಸ್ ಪ್ರಾರಂಭಿಸಿದ ಕ್ರಿಕೆಟಿಗ ಮನೋಜ್ ತಿವಾರಿ
ಕೊಲ್ಕತ್ತಾ: ಭಾರತೀಯ ಕ್ರಿಕೆಟ್ ತಂಡದ ಆಟಗಾರನಾಗಿದ್ದ ಮನೋಜ್ ತಿವಾರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
"ಇಂದಿನಿಂದ ಹೊಸ ಯಾತ್ರಯೊಂದು ಪ್ರಾರಂಭವಾಗಲಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಸಹಕಾರವನ್ನು ಕೋರುತ್ತಿದ್ದೇನೆ. ಇಂದಿನಿಂದ ನನ್ನ ರಾಜಕೀಯ ಜರ್ನಿಯ ಪ್ರೊಫೈಲ್ ಇದಾಗಿರಲಿದೆ" ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಲಿಂಕ್ ಅನ್ನು ಮನೋಜ್ ತಿವಾರಿ ಪ್ರಕಟಿಸಿದ್ದಾರೆ.
ಕೇಂದ್ರ ಸರಕಾರದ ಹಲವಾರು ನೀತಿಗಳ ವಿರುದ್ಧ ಹಾಗೂ ರೈತರ ಪ್ರತಿಭಟನೆಯ ಪರವಾಗಿ ಮನೋಜ್ ತಿವಾರ ಈ ಹಿಂದೆ ಕೆಲವು ಟ್ವೀಟ್ ಗಳನ್ನು ಮಾಡಿ ಸುದ್ದಿಯಾಗಿದ್ದರು.
A new journey begins from today. Need all your love & support. From now onwards this will be my political profile on Instagram.https://t.co/uZ9idMW7lD
— MANOJ TIWARY (@tiwarymanoj) February 24, 2021
A new journey begins from today. Need all your love & support. #DidiShowsTheWay #AssemblyElection #WestBengal #JoyBangla pic.twitter.com/TrrFX67USP
— MANOJ TIWARY (@tiwarymanoj) February 24, 2021