ಮಹಾರಾಷ್ಟ್ರ: ಹಾಸ್ಟೆಲ್ ನಲ್ಲಿ 190 ಶಾಲಾ ವಿದ್ಯಾರ್ಥಿಗಳು, ಶಿಕ್ಷಕರಿಗೆ ಕೋವಿಡ್ ಪಾಸಿಟಿವ್
ಮುಂಬೈ: ಮಹಾರಾಷ್ಟ್ರ ರಾಜ್ಯದಲ್ಲಿ ಮತ್ತೆ ಕೋವಿಡ್-19 ಹಾವಳಿ ಆರಂಭವಾಗಿದ್ದು, ವಾಶೀಂ ಜಿಲ್ಲೆಯ ಶಾಲೆಯ ಒಂದೇ ಹಾಸ್ಟೆಲ್ ನಲ್ಲಿ 190 ಪ್ರಕರಣಗಳು ವರದಿಯಾಗಿದೆ.
ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವವರ ಪೈಕಿ 186 ವಿದ್ಯಾರ್ಥಿಗಳು ಹಾಗೂ ನಾಲ್ವರು ಶಿಕ್ಷಕರು ಸೇರಿದ್ದಾರೆ. ಶಾಲಾ ಆವರಣವನ್ನು ಕಂಟೈನ್ ಮೆಂಟ್ ವಲಯವಾಗಿ ಘೋಷಿಸಲಾಗಿದೆ.
ವಿದ್ಯಾರ್ಥಿಗಳೆಲ್ಲರೂ ಅಮರಾವತಿ ಹಾಗೂ ಯಾವತ್ಮಲ್ ಜಿಲ್ಲೆಗೆ ಸೇರಿದವರಾಗಿದ್ದು, ಈ ಎರಡು ಜಿಲ್ಲೆಗಳಲ್ಲಿ ಇತ್ತೀಚೆಗಿನ ವಾರಗಳಲ್ಲಿ ಕೊರೋನ ಪ್ರಕರಣಗಳು ಹೆಚ್ಚು ವರದಿಯಾಗಿತ್ತು.
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 8,000ಕ್ಕೂ ಅಧಿಕ ಹೊಸ ಪ್ರಕರಣಗಳು ದಾಖಲಾಗಿವೆ.
Next Story