ದೇಶದಲ್ಲಿ ಡಿಸೆಂಬರ್ 6ರ ಬಳಿಕ ಕೊರೋನ ಹೊಸ ಪ್ರಕರಣದಲ್ಲಿ ಭಾರೀ ಏರಿಕೆ
ಹೊಸದಿಲ್ಲಿ: ಕಳೆದ ವರ್ಷದ ಡಿಸೆಂಬರ್ ಬಳಿಕ ಭಾರತದಲ್ಲಿ ಕೊರೋನ ವೈರಸ್ ನ ದೈನಂದಿನ ಪ್ರಕರಣದ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಆರೋಗ್ಯ ಸಚಿವಾಲಯದ ಅಂಕಿಅಂಶದ ಪ್ರಕಾರ ಗುರುವಾರ ಒಂದೇ ದಿನ ದೇಶದಲ್ಲಿ 35,871 ಹೊಸ ಕೊರೋನ ಕೇಸ್ ಗಳು ವರದಿಯಾಗಿವೆ.
ದೇಶದಲ್ಲಿ ಈಗ ಒಟ್ಟು ಕೊರೋನ ಕೇಸ್ ಗಳು 1,14,74,605ಕ್ಕೆ ಏರಿಕೆಯಾಗಿದ್ದು, ಇದು ಅಮೆರಿಕ ಹಾಗೂ ಬ್ರ್ರೆಝಿಲ್ ಬಳಿಕ ವಿಶ್ವದಲ್ಲಿ ಅತ್ಯಧಿಕ ಪ್ರಕರಣವಾಗಿದೆ.
102 ದಿನಗಳ ಬಳಿಕ ಒಂದೇ ದಿನ 35,871 ಕೇಸ್ ಗಳು ವರದಿಯಾಗಿದೆ ಎಂದು ಪಿಟಿಐ ತಿಳಿಸಿದೆ.
ಡಿಸೆಂಬರ್ 6ರಂದು ಸುಮಾರು 36,011 ಕೇಸ್ ಗಳು ದಾಖಲಾಗಿದ್ದವು.
ದೇಶದಲ್ಲಿ ಸತತ 8ನೇ ದಿನ 20,000ಕ್ಕೂ ಅಧಿಕ ಸೋಂಕುಗಳು ದಾಖಲಾಗಿವೆ.
Next Story