ಐಸಿಯುನಲ್ಲಿದ್ದ ಮಹಿಳೆಯ ಮೇಲೆ ಅತ್ಯಾಚಾರ,ಪುರುಷ ನರ್ಸ್ ಬಂಧನ
ಜೈಪುರ,ಮಾ.18: ಇಲ್ಲಿಯ ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ದಾಖಲಿಸಲ್ಪಟ್ಟಿದ್ದ ಮಹಿಳೆಯ ಮೇಲೆ ಪುರುಷ ನರ್ಸ್ ಓರ್ವ ಅತ್ಯಾಚಾರ ನಡೆಸಿದ ಹೇಯ ಘಟನೆ ಸಂಭವಿಸಿದೆ.
ಮಹಿಳೆಯ ಪತಿಯ ದೂರಿನ ಮೇರೆಗೆ ಆರೋಪಿಯನ್ನು ಮಂಗಳವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಸೋಮವಾರ ರಾತ್ರಿ ಈ ಕೃತ್ಯವನ್ನೆಸಗಿದ್ದ. ಅಸ್ವಸ್ಥ ಮಹಿಳೆ ಅರೆಪ್ರಜ್ಞಾವಸ್ಥೆಯಲ್ಲಿದ್ದಳು ಮತ್ತು ಆಕೆ ತನ್ನ ಮೇಲಿನ ದೌರ್ಜನ್ಯವನ್ನು ಸಾಧ್ಯವಾದಷ್ಟು ಮಟ್ಟಿಗೆ ಪ್ರತಿರೋಧಿಸಿದ್ದಳು ಎಂದು ಡಿಸಿಪಿ ಮೋಹನ ಶರ್ಮಾ ತಿಳಿಸಿದರು.
ಮರುದಿನ ಬೆಳಿಗ್ಗೆ ತನ್ನನ್ನು ಭೇಟಿಯಾಗಲು ಬಂದಿದ್ದ ಪತಿಗೆ ಮಹಿಳೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಕಾಗದದಲ್ಲಿ ಬರವಣಿಗೆಯ ಮೂಲಕ ತಿಳಿಸಿದ್ದಳು ಎಂದರು.
Next Story