ದಿಲ್ಲಿ-ಲಕ್ನೊ ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಕಾಣಿಸಿಕೊಂಡ ಬೆಂಕಿ, ಪ್ರಯಾಣಿಕರು ಸುರಕ್ಷಿತ
photo: ANI
ಗಾಝಿಯಾಬಾದ್: ಗಾಝಿಯಾಬಾದ್ ನಿಲ್ದಾಣದಲ್ಲಿ ಲಕ್ನೋದತ್ತ ಹೊರಟ ಶತಾಬ್ದಿ ಎಕ್ಸ್ ಪ್ರೆಸ್ ನ ಜನರೇಟರ್ ಕೋಚ್ ನಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಭಾರೀ ಹೊಗೆ ಆವರಿಸಿಕೊಂಡಿತು. ರೈಲಿನಲ್ಲಿದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಶನಿವಾರ ಬೆಳಗ್ಗೆ 6:41ರ ಸುಮಾರಿಗೆ ರೈಲು ಗಾಝಿಯಾಬಾದ್ ನಿಲ್ದಾಣಕ್ಕೆ ಆಗಮಿಸಿದ್ದು, ಜನರೇಟರ್ ಕೋಚ್ ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಉಂಟಾಗಿರುವ ಹೊಗೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ಕಾಣಿಸಿಕೊಂಡ ಕೋಚ್ ನ್ನು ಬೇರ್ಪಡಿಸಿದ ನಂತರ ಬೆಳಗ್ಗೆ 8:20ರ ಸುಮಾರಿಗೆ ರೈಲು ಗಾಝಿಯಾಬಾದ್ನಿಂದ ಲಕ್ನೋಗೆ ಹೊರಟಿತು ಎಂದು ರೈಲ್ವೆ ತಿಳಿಸಿದೆ.
#UttarPradesh | Fire breaks out at the generator car of #shatabdiExpress at #Ghaziabad railway station. More details awaited pic.twitter.com/b9a5Dihrhy
— Duniya Jahaan (@DuniyaJahaan) March 20, 2021
Again fire in #shatabdiexpress New Delhi to Lucknow train #02004 #irctc #IndianRailways pic.twitter.com/J6Sxp0BBnb
— Ankit Shukla (@AnkitSh96805762) March 20, 2021