ಶಶಿ ತರೂರ್ ಗೆ ಕೋವಿಡ್-19 ಪಾಸಿಟಿವ್
ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಸಂಸದ ಶಶಿ ತರೂರ್ ಅವರಿಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ. ತನ್ನ ತಾಯಿ ಹಾಗೂ ಸಹೋದರಿಗೆ ಕೂಡ ಕೊರೋನ ಸೋಂಕು ತಗಲಿದೆ ಎಂದು ತರೂರ್ ಟ್ವೀಟಿಸಿದ್ದಾರೆ.
“ಮನಸ್ಸಿನ ಸಕಾರಾತ್ಮಕ ಚೌಕಟ್ಟು, ವಿಶ್ರಾಂತಿಯೊಂದಿಗೆ ಕೋವಿಡ್ ಎದುರಿಸುವ ವಿಶ್ವಾಸದಲ್ಲಿದ್ದೇನೆ. ನನ್ನ ಸಹೋದರಿ ಹಾಗೂ 85ರ ವಯಸ್ಸಿನ ತಾಯಿಗೂ ಕೊರೋನ ಸೋಂಕು ಬಾಧಿಸಿದೆ ಎಂದು ತರೂರ್ ಟ್ವೀಟಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸರ್ಜೇವಾಲಾ ಹಾಗೂ ದಿಗ್ವಿಜಯ್ ಸಿಂಗ್ ಅವರಿಗೂ ಕೊರೋನ ಸೋಂಕು ತಗಲಿತ್ತು. ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಕೋವಿಡ್-19 ಸೋಂಕಿಗೆ ಒಳಗಾಗಿ ಸದ್ಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Next Story