ಮುಂಬೈ:ಕೊರೋನ ಕೇಸ್ ಗಳಲ್ಲಿ ಇಳಿಮುಖ
ಮುಂಬೈ: ಮುಂಬೈನಲ್ಲಿ ಶನಿವಾರ ಸಂಜೆ 5,888 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು ಶುಕ್ರವಾರ (7,221) ಹಾಗೂ ಗುರುವಾರ (7,410)ವರದಿಯಾಗಿರುವ ಪ್ರಕರಣಗಳಿಗೆ ಹೋಲಿಸಿದರೆ ಗಮನಾರ್ಹ ಕುಸಿತವಾಗಿದೆ. ವೈರಸ್ಗೆ ಸಂಬಂಧಿಸಿರುವ ಸಾವುಗಳ ಸಂಖ್ಯೆ ಸರಿಸುಮಾರು ಒಂದೇ ಆಗಿದ್ದು, ಶನಿವಾರ 71, ಶುಕ್ರವಾರ 72 ಹಾಗೂ ಗುರುವಾರ 75 ಮಂದಿ ಮೃತಪಟ್ಟಿದ್ದಾರೆ.
ಮುಂಬೈ ನಗರವು ಈ ಮೊದಲು ದೇಶದಲ್ಲಿ ಹೆಚ್ಚು ಕೊರೋನ ಪೀಡಿತವಾಗಿತ್ತು. ಶನಿವಾರ ಕೊನೆಗೊಳ್ಳುವ 24 ಗಂಟೆಗಳ ಅವಧಿಯಲ್ಲಿ ಸುಮಾರು 40,000 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಶುಕ್ರವಾರ ಸುಮಾರು 42,000 ಪರೀಕ್ಷೆಗಳನ್ನು ನಡೆಸಲಾಗಿತ್ತು.
ಕಳೆದ ವಾರ ದೈನಂದಿನ ಪಾಸಿಟಿವ್ ದರ 18 ಶೇ. ಇತ್ತು. ಈ ಪ್ರಮಾಣವು ಶೇಕಡಾ 15 ಕ್ಕಿಂತ ಕಡಿಮೆಯಾಗಿದೆ.
Next Story