ಕೋವಿಡ್ ಸೋಂಕಿನಿಂದ ಮೃತಪಟ್ಟ ಎನ್ಎಸ್ಜಿ ಹಿರಿಯ ಕಮಾಂಡರ್
ಹೊಸದಿಲ್ಲಿ, ಮೇ 5: ಎನ್ಎಸ್ಜಿಯ ಹಿರಿಯ ಕಮಾಂಡರ್ ಓರ್ವರು ಕೊರೋನ ಸೋಂಕಿನಿಂದ ಬುಧವಾರ ಮೃತಪಟ್ಟಿದ್ದಾರೆ. ಇದು ಕೊರೋನ ಸೋಂಕಿನಿಂದ ಎನ್ಎಸ್ಜಿಯಲ್ಲಿ ಸಾವನ್ನಪ್ಪಿರುವ ಮೊದಲ ಪ್ರಕರಣ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಗ್ರೂಪ್ ಕಮಾಂಡರ್ ಬಿ.ಕೆ. ಝಾ (53) ಅವರನ್ನು ಗ್ರೇಟರ್ ನೋಯ್ಡೆದಲ್ಲಿರುವ ಕೇಂದ್ರ ಶಸಸ್ತ್ರ ಪೊಲೀಸ್ ಪಡೆ (ಸಿಎಪಿಎಫ್)ಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದರು ಎಂದು ಅವರು ಹೇಳಿದ್ದಾರೆ. ಬಿಎಸ್ಎಫ್ ಆಡಳಿತಾತ್ಮಕ ಘಟಕವೊಂದರಲ್ಲಿ ಝಾ ಅವರು ಕಾರ್ಯ ನಿರ್ವಹಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಬಿಹಾರ ಮೂಲದ ಝಾ ಅವರು ಬಿಎಸ್ಎಫ್ ಕೇಡರ್ನ 1993ನೇ ಬ್ಯಾಚ್ ನ ಅಧಿಕಾರಿ. 2018ರಲ್ಲಿ ಅವರು ಬಿಎಸ್ಎಫ್ಗೆ ಅಧಿಕಾರಿಯಾಗಿ ಡೆಪ್ಯುಟೇಶನ್ ಮೇಲೆ ನಿಯೋಜಿತರಾಗಿದ್ದರು. ಈ ಹಿಂದೆ ಅವರು ಪ್ರಾಥಮಿಕ ಸಿಬ್ಬಂದಿ ಅಧಿಕಾರಿ ಹಾಗೂ ಬಿಎಸ್ಎಫ್ ಪ್ರಧಾನ ನಿರ್ದೇಶಕರ ಕಮಾಂಡೆಂಟ್ ಆಗಿ ಕಾರ್ಯ ನಿರ್ವಹಿಸಿದ್ದರು.
Next Story