ಕೋವಿಡ್ ಪರಿಹಾರ ನಿಧಿಗೆ 11 ಕೋ.ರೂ. ಸಂಗ್ರಹಿಸಿದ ವಿರಾಟ್ ಕೊಹ್ಲಿ-ಅನುಷ್ಕಾ
ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ನಡೆಸುತ್ತಿರುವ ಕೋವಿಡ್ ಪರಿಹಾರ ನಿಧಿ ಸಂಗ್ರಹ ಅಭಿಯಾನದಲ್ಲಿ ಸುಮಾರು 11 ಕೋ.ರೂ. ರೂ. ಸಂಗ್ರಹವಾಗಿದೆ.
ಕೊಹ್ಲಿ ದಂಪತಿ ಆರಂಭದಲ್ಲಿ 2 ಕೋ.ರೂ.ದೇಣಿಗೆ ನೀಡಿ ಅಭಿಯಾನ ಆರಂಭಿಸಿದ್ದರು. ಇಲ್ಲಿಸಂಗ್ರಹವಾದ ಮೊತ್ತವನ್ನು ಆ್ಯಕ್ಟ್ ಗ್ರ್ಯಾಂಟ್ಸ್ ಸಂಸ್ಥೆಗೆ ನೀಡಲಾಗುತ್ತದೆ. ಈ ಸಂಸ್ಥೆಯು ಆಮ್ಲಜನಕ, ವೈದ್ಯರ ಸೇವೆ, ಲಸಿಕೆ ಕುರಿತು ಜಾಗೃತಿ ಹಾಗೂ ಟೆಲಿ ಮೆಡಿಸಿನ್ ಸೇವಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.
ಒಂದು ವಾರದ ಅವಧಿಗೆ ನಡೆಯುತ್ತಿರುವಅಭಿಯಾನಕ್ಕೆ ಇನ್ನೂ ಎರಡು ದಿನ ಬಾಕಿ ಇದೆ. ಒಟ್ಟು 7 ಕೋರೂ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ ಆ ಮೊತ್ತವನ್ನು ದಾಟಿ ಅಭಿಯಾನ ಮುಂದುವರಿದಿದೆ.
Next Story