ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೊಮ್ಮೆ ಏರಿಕೆ
ಹೊಸದಿಲ್ಲಿ: ಒಂದು ದಿನದ ವಿರಾಮದ ನಂತರ ರವಿವಾರ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಮತ್ತೆ ಹೆಚ್ಚಿಸಲಾಗಿದೆ.
ದಿಲ್ಲಿಯಲ್ಲಿ, ಪೆಟ್ರೋಲ್ ಬೆಲೆ ಲೀಟರ್ಗೆ 24 ಪೈಸೆ ಹೆಚ್ಚಳವಾಗಿದ್ದು, 92.34 ರಿಂದ. 92.58 ಕ್ಕೆ ಏರಿಕೆಯಾಗಿದೆ. ಡೀಸೆಲ್ ಬೆಲೆ 27 ಪೈಸೆ ಏರಿಕೆಯಾಗಿದ್ದು, ಲೀಟರ್ಗೆ 82.95 ರೂ.ನಿಂದ 83.22 ಕ್ಕೆ ಏರಿಸಲಾಗಿದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ.
ಪ್ರಸ್ತುತ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮುಂಬೈಯಲ್ಲಿ ಗರಿಷ್ಠವಾಗಿದೆ. ಮುಂಬೈಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 98.88 ರೂ.ಗೆ ಮಾರಾಟವಾಗುತ್ತಿದೆ ಹಾಗೂ ಡೀಸೆಲ್ ಅನ್ನು ಪ್ರತಿ ಲೀಟರ್ಗೆ. 90.40 ಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಸರಕಾರಿ ತೈಲ ಸಂಸ್ಕರಣಾ ಸಂಸ್ಥೆ ತಿಳಿಸಿದೆ.
ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಮೇ 4 ರ ಬಳಿಕ ಒಂಬತ್ತನೇ ಬಾರಿ ದರ ಪರಿಷ್ಕರಣೆ ಮಾಡಿವೆ. 5 ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿದ್ದಾಗ ತೈಲ ಬೆಲೆ ಏರಿಕೆಯಾಗಿರಲಿಲ್ಲ.
Next Story