ಬಾಂಬೆ ಹೈನಲ್ಲಿ ಲಂಗರಿನ ನಿಯಂತ್ರಣ ಕಳೆದುಕೊಂಡ ಒಎನ್ಜಿಸಿಯ ಬಾರ್ಜ್: ಎಲ್ಲ 261 ಜನರು ಸುರಕ್ಷಿತ | Vartha Bharati- ವಾರ್ತಾ ಭಾರತಿ

--

ಬಾಂಬೆ ಹೈನಲ್ಲಿ ಲಂಗರಿನ ನಿಯಂತ್ರಣ ಕಳೆದುಕೊಂಡ ಒಎನ್ಜಿಸಿಯ ಬಾರ್ಜ್: ಎಲ್ಲ 261 ಜನರು ಸುರಕ್ಷಿತ

ಮುಂಬೈ,ಮೇ 17: ಮುಂಬೈ ತೀರದಾಚೆ ಅರಬಿ ಸಮುದ್ರದ ಬಾಂಬೆ ಹೈ ಪ್ರದೇಶದಲ್ಲಿ ತೈಲಬಾವಿಗಳನ್ನು ಕೊರೆಯಲು ನಿಯೋಜಿತ ತನ್ನ 261 ಸಿಬ್ಬಂದಿಗಳನ್ನು ಹೊತ್ತಿದ್ದ ಬಾರ್ಜ್ ತೌಕ್ತೆ ಚಂಡಮಾರುತದ ಅಬ್ಬರದಿಂದಾಗಿ ಲಂಗರಿನ ನಿಯಂತ್ರಣ ಕಳೆದುಕೊಂಡು ದಿಕ್ಕು ತಪ್ಪಿ ಸಾಗತೊಡಗಿತ್ತು,ಆದರೆ ಅದನ್ನು ಸ್ಥಿರಗೊಳಿಸಲಾಗಿದ್ದು ಅದರಲ್ಲಿದ್ದ ಎಲ್ಲ ಜನರು ಸುರಕ್ಷಿತರಾಗಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಒಎನ್ಜಿಸಿ ಸೋಮವಾರ ತಿಳಿಸಿದೆ.

ಚಂಡಮಾರುತಕ್ಕೆ ಮುನ್ನ ಬಾರ್ಜ್ ಪಿ305 ಅನ್ನು ಲಂಗರು ಹಾಕಿ ನಿಲ್ಲಿಸಲಾಗಿತ್ತು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಒಎನ್ಜಿಸಿ ವಕ್ತಾರರು ಹೇಳಿದರು.
ಚಂಡಮಾರುತವು ಈಗಲೂ ಕ್ರಿಯಾಶೀಲವಾಗಿರುವುದರಿಂದ ಪರಿಸ್ಥಿತಿಯ ಮೇಲೆ ನಿರಂತರ ನಿಗಾಯಿರಿಸಲಾಗಿದೆ.

ಯಾವುದೇ ಅಹಿತಕರ ಘಟನೆಯನ್ನು ತಡೆಯಲು ನೌಕಾಪಡೆಯು ತನ್ನ ಯುದ್ಧನೌಕೆ ಐಎನ್ಎಸ್ ಕೊಚ್ಚಿ ಮತ್ತು ಇತರ ಬಲಗಳನ್ನು ನಿಯೋಜಿಸಿದೆ ಎಂದೂ ವಕ್ತಾರರು ತಿಳಿಸಿದರು. ಬಾಂಬೆ ಹೈ ಒಎನ್ಜಿಸಿಯ ಅತ್ಯಂತ ದೊಡ್ಡ ತೈಲ ಮತ್ತು ಅನಿಲ ನಿಕ್ಷೇಪವಾಗಿದ್ದು ,ಅರಬಿ ಸಮುದ್ರದಲ್ಲಿಯ ಪ್ಲಾಟ್‌ ಫಾರ್ಮಗಳಿಂದ ತೈಲಬಾವಿಗಳನ್ನು ಕೊರೆಯುವ ಕೆಲಸವನ್ನು ನಿರ್ವಹಿಸುತ್ತಿದೆ. ಮಾಧ್ಯಮಗಳ ವರದಿಯಂತೆ ಅದು ಹೀರಾ ಪ್ಲಾಟ್ ಫಾರ್ಮ್‌ ನಿಂದ ದಿನವೊಂದಕ್ಕೆ 50,000 ಬ್ಯಾರೆಲ್ ಕಚ್ಚಾ ತೈಲವನ್ನು ಉತ್ಪಾದಿಸುತ್ತಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top