ಪಿಣರಾಯಿ ನೇತೃತ್ವದಲ್ಲಿ 21 ಸಚಿವರ ಸಂಪುಟ ರಚನೆಗೆ ಎಲ್ಡಿಎಫ್ ರಾಜ್ಯಸಮಿತಿ ನಿರ್ಧಾರ | Vartha Bharati- ವಾರ್ತಾ ಭಾರತಿ

--

ಪಿಣರಾಯಿ ನೇತೃತ್ವದಲ್ಲಿ 21 ಸಚಿವರ ಸಂಪುಟ ರಚನೆಗೆ ಎಲ್ಡಿಎಫ್ ರಾಜ್ಯಸಮಿತಿ ನಿರ್ಧಾರ

ತಿರುವನಂತಪುರ,ಮೇ 17: ಎಲ್ಡಿಎಫ್ ರಾಜ್ಯ ಸಮಿತಿಯು ಸೋಮವಾರ ಇಲ್ಲಿ ಸಭೆ ಸೇರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ 21 ಸಚಿವರ ಸಂಪುಟ ರಚನೆಗೆ ನಿರ್ಧರಿಸಿದೆ. ನೂತನ ಸಚಿವ ಸಂಪುಟವು ಗುರುವಾರ ಅಪರಾಹ್ನ ಸೆಂಟ್ರಲ್ ಸ್ಟೇಡಿಯಮ್ ನಲ್ಲಿ ಕನಿಷ್ಠ ಆಹ್ವಾನಿತರೊಂದಿಗೆ ನಡೆಯಲಿರುವ ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದೆ. ತಲಾ ಓರ್ವರು ಶಾಸಕರನ್ನು ಹೊಂದಿರುವ ನಾಲ್ಕು ಪಕ್ಷಗಳಿಗೆ ‘ಅವಧಿಯನ್ನು ಹಂಚಿಕೊಳ್ಳುವ ’ಆಧಾರದಲ್ಲಿ ಸಚಿವ ಹುದ್ದೆಗಳನ್ನು ನೀಡಲೂ ಸಮಿತಿಯು ನಿರ್ಧರಿಸಿದೆ.

ಡೆಮಾಕ್ರಟಿಕ್ ಕೇರಳ ಕಾಂಗ್ರೆಸ್ನ ಆ್ಯಂಟನಿ ರಾಜು ಮತ್ತು ಇಂಡಿಯನ್ ನ್ಯಾಷನಲ್ ಲೀಗ್ನ ಅಹ್ಮದ್ ದೇವರಕೋವಿಲ್ ಅವರು ಮೊದಲ 30 ತಿಂಗಳು ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ. ಮುಂದಿನ 30 ತಿಂಗಳ ಅವಧಿಗೆ ಅವರ ಸ್ಥಾನಗಳಲ್ಲಿ ಕೇರಳ ಕಾಂಗ್ರೆಸ್(ಬಿ)ನ ಕೆ.ಬಿ.ಗಣೇಶ್ ಕುಮಾರ್ ಮತ್ತು ಕಾಂಗ್ರೆಸ್ (ಎಸ್)ನ ರಾಮಚಂದ್ರನ್ ಕಡನ್ನಪಲ್ಲಿ ಅವರು ಸಚಿವರಾಗಲಿದ್ದಾರೆ. ಲೋಕತಾಂತ್ರಿಕ ಜನತಾ ದಳ (ಎಲ್ಜೆಡಿ)ದ ಏಕೈಕ ಶಾಸಕ ಕೆ.ಪಿ.ಮೋಹನನ್ ಅವರಿಗೆ ಸಂಪುಟದಲ್ಲಿ ಸ್ಥಾನವನ್ನು ಹಂಚಿಕೆ ಮಾಡಲಾಗಿಲ್ಲ. ಎಲ್ಜೆಡಿ ಮೊದಲು ಎರಡು ಶಾಸಕರನ್ನು ಹೊಂದಿರುವ ಜೆಡಿಎಸ್ನ ಭಾಗವಾಗಿದ್ದರಿಂದ ಅವೆರಡನ್ನೂ ಒಂದೇ ಪಕ್ಷವಾಗಿ ಸಮಿತಿಯು ಪರಿಗಣಿಸಿರುವುದು ಈ ನಿರ್ಧಾರಕ್ಕೆ ಕಾರಣವಾಗಿದೆ.

ಕೇರಳ ಕಾಂಗ್ರೆಸ್ನಿಂದ ಇಡುಕ್ಕಿ ಶಾಸಕ ರೋಷಿ ಆಗಸ್ಟಿನ್ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಮತ್ತು ಕಾಂಜಿರಪಲ್ಲಿಯಿಂದ ಆಯ್ಕೆಯಾಗಿರುವ ಪಕ್ಷದ ಶಾಸಕ ಎನ್.ಜಯರಾಜ್ ಅವರು ಮುಖ್ಯ ಸಚೇತಕರಾಗಲಿದ್ದಾರೆ.

ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಮತ್ತು ರಾಜ್ಯ ಸಮಿತಿ ಹಾಗೂ ಸಿಪಿಐ ರಾಜ್ಯ ಕಾರ್ಯಕಾರಿಣಿ ಮತ್ತು ರಾಜ್ಯ ಮಂಡಳಿ ಮಂಗಳವಾರ ಇಲ್ಲಿ ಸಭೆ ಸೇರಿ ಸಚಿವ ಹುದ್ದೆಗಳಿಗೆ ತಮ್ಮ ಶಾಸಕರ ಹೆಸರುಗಳನ್ನು ಅಂತಿಮಗೊಳಿಸಲಿವೆ. ಸಿಪಿಎಂ 12,ಸಿಪಿಐ 4,ಎನ್ಸಿಪಿ ಮತ್ತು ಜೆಡಿಎಸ್ ತಲಾ ಓರ್ವ ಸಚಿವರನ್ನು ಹೊಂದಲಿವೆ. ಸಿಪಿಎಂ ಅಭ್ಯರ್ಥಿ ಸ್ಪೀಕರ್ ಮತ್ತು ಸಿಪಿಐ ಅಭ್ಯರ್ಥಿ ಉಪ ಸ್ಪೀಕರ್ ಆಗಿ ನೇಮಕಗೊಳ್ಳಲಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top