ವಿವಾಹ ಸಮಾರಂಭದಲ್ಲಿ ಪಟಾಕಿ ಶಬ್ದಕ್ಕೆ ಕೆರಳಿ ಕಾರುಗಳನ್ನು ಉರುಳಿಸಿದ ಆನೆ
ಹೊಸದಿಲ್ಲಿ: ವಿವಾಹ ಸಮಾರಂಭದಲ್ಲಿ ಪಟಾಕಿ ಶಬ್ದದಿಂದ ಕೆರಳಿದ ಆನೆಯೊಂದು ಮದುವೆ ಮನೆಯಲ್ಲಿ ದಾಂಧಲೆ ನಡೆಸಿದ್ದಲ್ಲದೆ ನಾಲ್ಕು ಕಾರುಗಳನ್ನು ಉರುಳಿಸಿ ಹಾನಿಗೊಳಿಸಿರುವ ಘಟನೆ ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ಶುಕ್ರವಾರ ನಡೆದಿದೆ.
ಈ ಘಟನೆ ಪ್ರಯಾಗರಾಜ್ನ ಸಾರೈ ಇನಾಯತ್ ಪ್ರದೇಶದ ಅಮ್ಲಾಪುರ ಗ್ರಾಮದಲ್ಲಿ ನಡೆದಿದೆ. ಜೂನ್ 11 ರ ರಾತ್ರಿ, ಆನಂದ್ ತ್ರಿಪಾಠಿ ಎಂಬ ವರ ಆನೆಯ ಮೇಲೆ ಕುಳಿತು ನಾರಾಯಣಪುರ ಗ್ರಾಮದಿಂದ ಅಮ್ಲಾಪುರ ಗ್ರಾಮವನ್ನು ತಲುಪಿದ್ದರು.
ಆದರೆ, ಆನೆಯು ಪಟಾಕಿಗಳ ಶಬ್ದದಿಂದ ಕೆರಳಿತು ಹಾಗೂ ಮದುವೆಗಾಗಿ ಹಾಕಿದ್ದ 'ಪೆಂಡಾಲ್' ಅನ್ನು ನಾಶಪಡಿಸಿತು. ಅದು ಸ್ಥಳದಲ್ಲಿ ನಿಲ್ಲಿಸಿದ್ದ ನಾಲ್ಕು ಕಾರುಗಳನ್ನು ಉರುಳಿಸಿತು. ಘಟನೆಯಿಂಧ ಗಾಬರಿಗೊಂಡ ವರನು ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಆನೆಯನ್ನು ನಿಯಂತ್ರಿಸಲು ಸಹಾಯಕ್ಕಾಗಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳ ತಂಡವನ್ನು ಕರೆಸಲಾಯಿತು. ನಂತರ ಅರಣ್ಯ ಇಲಾಖೆ ಹಾಗೂ ಪೊಲೀಸ್ ತಂಡ ಆನೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
An elephant hired for a marriage function in UP's Prayagraj district's Sarai Inayat area went berserk. The violent elephant went on rampage at marriage venue, damaging property there. The groom had a narrow escape from the horsecart. @NewIndianXpress@khogensingh1@gsvasu_TNIE pic.twitter.com/itvgDMUypy
— Anuraag Singh (@anuraag_niebpl) June 12, 2021