ದಿಲ್ಲಿಯಲ್ಲಿ ಮಧ್ಯಾಹ್ನ ಲಘು ಭೂಕಂಪನ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ರವಿವಾರ ಮಧ್ಯಾಹ್ನ ಕಡಿಮೆ ತೀವ್ರತೆಯ ಭೂಕಂಪನ ಸಂಭವಿಸಿದೆ.
ಭೂಕಂಪನ ರಾಷ್ಟ್ರೀಯ ಕೇಂದ್ರದ ಪ್ರಕಾರ, 2.1 ರಷ್ಟಿರುವ ಭೂಕಂಪವು ದಿಲ್ಲಿಯ ಪಂಜಾಬಿ ಬಾಗ್ ಪ್ರದೇಶದಲ್ಲಿ ಮಧ್ಯಾಹ್ನ 12:02 ಗಂಟೆಗೆ ಮೇಲ್ಮೈಯಿಂದ 7 ಕಿ.ಮೀ ಆಳದಲ್ಲಿ ಅಪ್ಪಳಿಸಿತು.
ಜೀವ ಅಥವಾ ಆಸ್ತಿಗೆ ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ತಕ್ಷಣದ ವರದಿ ಲಭಿಸಿಲ್ಲ.
ಫೆಬ್ರವರಿಯಲ್ಲಿ ರಾಷ್ಟ್ರ ರಾಜಧಾನಿಯಿಂದ ಸುಮಾರು 1,200 ಕಿ.ಮೀ.ದೂರದಲ್ಲಿರುವ
ತಜಿಕಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪನ ಸಂಭವಿಸಿದ ಬಳಿಕ ದಿಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಸೆಕೆಂಡುಗಳ ಕಾಲ ತೀವ್ರ ನಡುಕ ಉಂಟಾಗಿತ್ತು.
Next Story