‘ಜಿಯೋಫೋನ್ ನೆಕ್ಸ್ಟ್’ ಸ್ಮಾರ್ಟ್ಫೋನ್ ಸೆಪ್ಟೆಂಬರ್ 10 ರಿಂದ ಲಭ್ಯ: ಮುಖೇಶ್ ಅಂಬಾನಿ
ಮುಂಬೈ: ಜಿಯೋ ಹಾಗೂ ಟೆಕ್ ಟೈಟಾನ್ ಗೂಗಲ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಪವರ್ ಪ್ಯಾಕ್ಡ್ ಕೈಗೆಟುಕುವ ಸ್ಮಾರ್ಟ್ ಫೋನ್ ‘ಜಿಯೋಫೋನ್ ನೆಕ್ಸ್ಟ್’ ಅನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಗುರುವಾರ ಪ್ರಕಟಿಸಿದ್ದಾರೆ.
‘ಜಿಯೋಫೋನ್ ನೆಕ್ಸ್ಟ್’ ಸೆಪ್ಟೆಂಬರ್ 10 ರಿಂದ ಲಭ್ಯವಾಗಲಿದ್ದು, ಇದು ಜಾಗತಿಕವಾಗಿ ಅತ್ಯಂತ ಉತ್ತಮ ಸ್ಮಾರ್ಟ್ಫೋನ್ ಆಗಲಿದೆ ಎಂದು ಆರ್ಐಎಲ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಾ ಅಂಬಾನಿ ಹೇಳಿದರು.
" ಅತ್ಯಂತ ಉತ್ತಮ" ಸ್ಮಾರ್ಟ್ಫೋನ್ ಧ್ವನಿ ಸಹಾಯಕ ಹಾಗೂ ಭಾಷಾ ಅನುವಾದ ಸೇರಿದಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುತ್ತದ. ರಿಲಯನ್ಸ್ ಜಿಯೋ ಗೂಗಲ್ ಮೇಘವನ್ನು 5 ಜಿಗಾಗಿ ಬಳಸಲಿದೆ ಎಂದು ಅವರು ಹೇಳಿದರು.
Next Story