ಇಂಗ್ಲೆಂಡ್ ತಂಡದ ಫುಟ್ಬಾಲ್ ಆಟಗಾರರ ವಿರುದ್ಧ ಜನಾಂಗೀಯ ನಿಂದನೆ: ಕ್ರಮ ಕೈಗೊಳ್ಳಲು ಬ್ರಿಟನ್ ಸರಕಾರ ಸೂಚನೆ
ಲಂಡನ್, ಜು.13: ಇಂಗ್ಲೆಂಡ್ ತಂಡದ ಕರಿಯ ಫುಟ್ಬಾಲ್ ಆಟಗಾರರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ರವಾನೆಯಾಗುತ್ತಿರುವ ಜನಾಂಗೀಯ ನಿಂದನೆಯ ಸಂದೇಶಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಬ್ರಿಟನ್ ಸರಕಾರ ಸಾಮಾಜಿಕ ಮಾಧ್ಯಮ ಸಂಸ್ಥೆಗಳನ್ನು ಎಚ್ಚರಿಸಿದೆ.
ರವಿವಾರ ನಡೆದ ಯುರೋ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದ ಬಳಿಕ ಇಂಗ್ಲೆಂಡಿನ ಕನಿಷ್ಟ 3 ಕರಿಯ ಆಟಗಾರರಿಗೆ ಜನಾಂಗೀಯ ನಿಂದನೆಯ ಸಂದೇಶ ರವಾನೆ ಯಾಗಿದೆ.( ಈ ಪಂದ್ಯದಲ್ಲಿ ಇಂಗ್ಲೆಂಡ್ ಸೋತಿದೆ). ನಿಂದನೆ ಮಾಡಿದವರ ವಿವರ ತಕ್ಷಣ ಒದಗಿಸುವಂತೆ ಸರಕಾರ ಸೂಚಿಸಿದೆ.
ಇಂತಹ ಸಂದೇಶಗಳ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆ ಕಠಿಣ ಕ್ರಮ ಕೈಗೊಳ್ಳುವುದನ್ನು ಖಾತರಿಪಡಿಸಬೇಕು. ಇಲ್ಲದಿದ್ದರೆ ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸರಕಾರ ಎಚ್ಚರಿಸಿದೆ.
Next Story