ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಆಗಸ್ಟ್ ತಿಂಗಳ ಅಧ್ಯಕ್ಷ ಸ್ಥಾನವಹಿಸಿಕೊಂಡ ಭಾರತ
ಸಾಂದರ್ಭಿಕ ಚಿತ್ರ, photo: The Week
ಹೊಸದಿಲ್ಲಿ: ಭಾರತವು ಆಗಸ್ಟ್ ತಿಂಗಳ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ರವಿವಾರ ವಹಿಸಿಕೊಂಡಿದೆ .
ಈ ಅವಧಿಯಲ್ಲಿ ವಿಶ್ವ ಸಂಸ್ಥೆಯ ಕಾರ್ಯನಿರ್ವಹಣೆಗೆ ಭಾರತವು ಪ್ರಮುಖ ಕಾರ್ಯಕ್ಷಮತೆಯ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ಹಲವಾರು ಪ್ರಮುಖ ಅಂಶಗಳನ್ನು ಹೊಂದಿದೆ. ಸಮುದ್ರ ಭದ್ರತೆ, ಶಾಂತಿಪಾಲನೆ ಮತ್ತು ಭಯೋತ್ಪಾದನೆ ವಿರುದ್ಧದ ಮೂರು ಪ್ರಮುಖ ಕ್ಷೇತ್ರಗಳಲ್ಲಿ ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಲು ಸಜ್ಜಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್ ನಲ್ಲಿ ಭಾರತ ಹತ್ತನೇ ಬಾರಿ ಅಧಿಕಾರ ವಹಿಸಿಕೊಂಡಿದೆ. ಇದುವರೆಗೆ ಒಂಬತ್ತು ಬಾರಿ ಅಧ್ಯಕ್ಷ ಸ್ಥಾನ ವಹಿಸಿತ್ತು. ಜೂನ್ 1950, ಸೆಪ್ಟೆಂಬರ್ 1967, ಡಿಸೆಂಬರ್ 1972, ಅಕ್ಟೋಬರ್ 1977, ಫೆಬ್ರವರಿ 1985, ಅಕ್ಟೋಬರ್ 1991, ಡಿಸೆಂಬರ್ 1992, ಆಗಸ್ಟ್ 2011 ಹಾಗೂ ನವೆಂಬರ್ 2012 ಅಧ್ಯಕ್ಷ ಸ್ಥಾನ ವಹಿಸಿತ್ತು.
"ನಾವು ನಮ್ಮ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುವಾಗ ಅದೇ ತಿಂಗಳು ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸುವುದು ನಮಗೆ ಒಂದು ಗೌರವವಾಗಿದೆ" ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ಟಿ.ಎಸ್. ತಿರುಮೂರ್ತಿ ಶನಿವಾರ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಆಗಸ್ಟ್ 1 ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ. ಭಾರತ ಹಾಗೂ ಫ್ರಾನ್ಸ್ ಐತಿಹಾಸಿಕ ಮತ್ತು ನಿಕಟ ಸಂಬಂಧವನ್ನು ಹೊಂದಿವೆ. ಭದ್ರತಾ ಮಂಡಳಿಯಲ್ಲಿ ನಾವು ಕಾರ್ಯನಿರ್ವಹಿಸಿದ ಸಮಯದಲ್ಲಿ ಅವರು ನಮಗೆ ನೀಡಿದ ಎಲ್ಲ ಬೆಂಬಲಕ್ಕಾಗಿ ನಾನು ಫ್ರಾನ್ಸ್ಗೆ ಧನ್ಯವಾದ ಹೇಳುತ್ತೇನೆ "ಎಂದು ಅವರು ಹೇಳಿದರು.