ಕುಸಿದುಬಿದ್ದ ʼನಮೋʼ ಕಾಲೇಜ್ ಮೇಲ್ಛಾವಣಿ: "ಮುಂಬರುವ ದಿನಗಳ ಚಿತ್ರಣವೇ?" ಎಂದು ಪ್ರಶ್ನಿಸಿದ ಮಾಜಿ ಐಎಎಸ್ ಅಧಿಕಾರಿ
Photo: bhaskar.com
ವಡೋದರ: ಗುಜರಾತ್ ನ ಕೇಂದ್ರಾಡಳಿತ ಪ್ರದೇಶವಾದ ದಾನಾದಲ್ಲಿನ ಸಿಲ್ವಾಸಾ ಎಂಬ ಪ್ರದೇಶದಲ್ಲಿ ೧೩೯ಕೋಟಿ ರೂ. ಖರ್ಚಿನಲ್ಲಿ ನಮೋ ವೈದ್ಯಕೀಯ ಕಾಲೇಜ್ ಅನ್ನು ನಿರ್ಮಿಸಲಾಗುತ್ತಿದೆ. ಇದೀಗ ನಿರ್ಮಾಣ ಹಂತದಲ್ಲೇ ಈ ಕಟ್ಟಡದ ಮೇಲ್ಛಾವಣಿಯು ಕುಸಿದು ಬಿದ್ದಿದೆ. ದೈನಿಕ್ ಭಾಸ್ಕರ್ ಈ ಕುರಿತು ವರದಿ ಪ್ರಕಟಿಸಿದ್ದು, ಜೊತೆಗೆ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥ್ ಕುರಿತು ಟ್ವೀಟ್ ಮಾಡಿದ್ದಾರೆ.
ಘಟನೆಯು ಗುರುವಾರದಂದು ನಡೆದಿದ್ದು, ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ. ಆದರೆ ಇತರ ಯಾವುದೇ ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ವರದಿ ಪ್ರಕಟವಾಗಿಲ್ಲ.
ಆದರೆ ಘಟನೆ ಕುರಿತು ಟ್ವೀಟ್ ಮಾಡಿದ ಕಣ್ಣನ್ ಗೋಪಿನಾಥ್, ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ, ಸಿಲ್ವಾಸಾದಿಂದ ದುಃಖಕರ ಸುದ್ದಿಯೊಂದು ಕೇಳಿ ಬಂದಿದೆ. ನಿರ್ಮಾಣ ಹಂತದಲ್ಲಿರುವ ನಮೋ ಮೆಡಿಕಲ್ ಕಾಲೇಜ್ ನ ಮೇಲ್ಛಾವಣಿ ಕುಸಿದು ಬಿದ್ದಿದೆ. ಇದು ಮುಂಬರುವ ದಿನಗಳ ಲಕ್ಷಣವೇ? ಅಥವಾ ಇದು ನಿಮ್ಮ ಬ್ರಾಂಡ್ ಅನ್ನು ಸೂಚಿಸುವ ಕಳಪೆ ಗುಣಮಟ್ಟದ ವಸ್ತುಗಳಿಂದ ಮಾಡಲ್ಪಟ್ಟಿದೆಯೇ? " ಎಂದು ಟ್ವೀಟ್ ಮಾಡಿದ್ದಾರೆ.
Dear PM @narendramodi, a distressing news coming from Silvassa.
— Kannan Gopinathan (@naukarshah) August 20, 2021
The facade of the "NAMO" medical college under construction collapses to ground.
Is it a sign of times to come?
Or a sign of cheap material that defines your brand? pic.twitter.com/mPnx0dwzYR