ಜೂನ್ 16ರಿಂದ ಜುಲೈ 31ರ ಅವಧಿಯಲ್ಲಿ 30 ಲಕ್ಷ ಭಾರತೀಯ ವಾಟ್ಸ್ಯಾಪ್ ಖಾತೆಗಳಿಗೆ ನಿಷೇಧ: ವರದಿ | Vartha Bharati- ವಾರ್ತಾ ಭಾರತಿ

--

ಜೂನ್ 16ರಿಂದ ಜುಲೈ 31ರ ಅವಧಿಯಲ್ಲಿ 30 ಲಕ್ಷ ಭಾರತೀಯ ವಾಟ್ಸ್ಯಾಪ್ ಖಾತೆಗಳಿಗೆ ನಿಷೇಧ: ವರದಿ

ಹೊಸದಿಲ್ಲಿ: ಹಾನಿಕಾರಕ ವರ್ತನೆ ಹಾಗೂ ಸ್ಪ್ಯಾಮ್ ತಡೆಯುವ ಉದ್ದೇಶದಿಂದ ವಾಟ್ಸ್ಯಾಪ್ ಈ ವರ್ಷದ ಜೂನ್ 16ರಿಂದ ಜುಲೈ 31ರ ತನಕ 30 ಲಕ್ಷಕ್ಕೂ ಅಧಿಕ ಭಾರತೀಯ ಖಾತೆಗಳನ್ನು ನಿಷೇಧಿಸಿದೆ ಎಂದು ಮಂಗಳವಾರ ಬಿಡುಗಡೆಗೊಳಿಸಲಾದ ಕಂಪೆನಿಯ ಮಾಸಿಕ ಪಾರದರ್ಶಕತೆ ವರದಿಯಲ್ಲಿ ತಿಳಿಸಲಾಗಿದೆ.

ಭಾರತದ ಹೊಸ ಐಟಿ ನಿಯಮಗಳು 2021ರ ಅನುಸಾರ ವಾಟ್ಸ್ಯಾಪ್ ಬಿಡುಗಡೆಗೊಳಿಸಿದ ಎರಡನೇ ಇಂತಹ ವರದಿ ಇದಾಗಿದೆ. ಭಾರತೀಯ ಖಾತೆಯನ್ನು ಸಂಸ್ಥೆಯು +91 ಫೋನ್ ಸಂಖ್ಯೆಯ ಮೂಲಕ ಗುರುತಿಸುತ್ತದೆ. ನಿಷೇಧಗೊಂಡ ಭಾರತೀಯ ಖಾತೆಗಳ ಪೈಕಿ ಶೇ95ಕ್ಕೂ ಅಧಿಕ ಖಾತೆಗಳು ಅನಧಿಕೃತವಾಗಿ ಆಟೊಮೇಟೆಡ್ ಅಥವಾ ಬಲ್ಕ್ ಮೆಸೇಜಿಂಗ್ ಬಳಸಿವೆ. ಜಾಗತಿಕವಾಗಿ ಹೇಳುವುದಾದರೆ ಮಾಸಿಕ ಸುಮಾರು 80 ಲಕ್ಷ ಖಾತೆಗಳು ನಿಷೇಧಗೊಳಗಾಗುತ್ತವೆ.

ಮೇಲೆ ತಿಳಿಸಿದ ಅವಧಿಯಲ್ಲಿ ನಿಷೇಧ ಮನವಿ, ಉತ್ಪನ್ನ ಬೆಂಬಲ, ಖಾತೆ ಬೆಂಬಲ, ಸುರಕ್ಷತಾ ಬೆಂಬಲಕ್ಕೆ ಸಂಬಂಧಿಸಿದಂತೆ 594 ದೂರುಗಳು ಬಳಕೆದಾರರಿಂದ ಬಂದಿವೆ ಹಾಗೂ ಇವುಗಳ ಪೈಕಿ 74 ಪ್ರಕರಣಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ, ಈ 74 ಪ್ರಕರಣಗಳ ಪೈಕಿ 73 ಖಾತೆ ನಿಷೇಧಕ್ಕೆ ಸಂಬಂಧಿಸಿದ ಅಪೀಲುಗಳಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top