ಆಗಸ್ಟ್ ನಲ್ಲಿ ಶೇ 8.32ಗೆ ಏರಿಕೆಯಾದ ನಿರುದ್ಯೋಗ ಪ್ರಮಾಣ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕದಿಂದಾಗಿ ಆಗಸ್ಟ್ ತಿಂಗಳಲ್ಲಿ ಉದ್ಯೋಗ ಕ್ಷೇತ್ರದಲ್ಲಿ ನೇಮಕಾತಿಗಳೂ ಬಾಧಿತವಾಗಿದ್ದರಿಂದ ಭಾರತದ ನಿರುದ್ಯೋಗ ಪ್ರಮಾಣ ಕಳೆದ ತಿಂಗಳು ಶೇ 8.32ಗೆ ಏರಿಕೆಯಾಗಿದೆ. ಜುಲೈ ತಿಂಗಳಲ್ಲಿ ನಿರುದ್ಯೋಗ ಪ್ರಮಾಣ ಶೇ 6.95ರಷ್ಟಾಗಿತ್ತು ಎಂದು ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ಎಂಬ ಖಾಸಗಿ ಸಂಸ್ಥೆಯ ಅಂಕಿಅಂಶಗಳಿಂದ ತಿಳಿದು ಬಂದಿದೆ.
ಕಳೆದ ತಿಂಗಳಲ್ಲಿ ಸುಮಾರು 10 ಲಕ್ಷ ಉದ್ಯೋಗ ನಷ್ಟವಾಗಿದೆ ಎಂದು ಸಿಎಂಐಇ ಸಮೀಕ್ಷೆ ತಿಳಿಸಿದೆ. ಆದರೆ ಎಪ್ರಿಲ್ ತಿಂಗಳಿಗೆ ಹೋಲಿಸಿದಾಗ ಈ ಸಂಖ್ಯೆ ಕಡಿಮೆಯಾಗಿದೆ. ಎಪ್ರಿಲಿನಲ್ಲಿ 70 ಲಕ್ಷಕ್ಕೂ ಅಧಿಕ ಉದ್ಯೋಗ ನಷ್ಟವಾಗಿರುವುದು ಸಮೀಕ್ಷೆಗಳಿಂದ ತಿಳಿದು ಬಂದಿತ್ತು.
Next Story