ಕೇರಳ: ನಿಫಾ ವೈರಸ್ ಸೋಂಕಿಗೆ ಬಾಲಕ ಮೃತ್ಯು
ಸಾಂದರ್ಭಿಕ ಚಿತ್ರ, PTI
ಕೋಯಿಕ್ಕೋಡ್: ನಿಫಾ ವೈರಸ್ ಸೋಂಕಿನಿಂದಾಗಿ ಕೇರಳದ ಆಸ್ಪತ್ರೆಯಲ್ಲಿ 12 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ರವಿವಾರ ಹೇಳಿದ್ದಾರೆ.
ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾದ ಈ ಹುಡುಗನ ಮಾದರಿಗಳು ನಿಫಾ ವೈರಸ್ ಇರುವುದನ್ನು ದೃಢಪಡಿಸಿದೆ.
ಕೇಂದ್ರ ಸರಕಾರವು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ತಂಡವನ್ನು ರಾಜ್ಯಕ್ಕೆ ರವಾನಿಸಿದೆ. ತಂಡವು ರವಿವಾರ ತಲುಪಲಿದೆ. ಈ ತಂಡವು ರಾಜ್ಯಕ್ಕೆ ತಾಂತ್ರಿಕ ಬೆಂಬಲವನ್ನು ನೀಡುತ್ತದೆ.
ಸುದ್ದಿಗಾರರಿಗೆ ಪ್ರಕರಣದ ವಿವರ ನೀಡಿದ ಸಚಿವರು "ದುರದೃಷ್ಟವಶಾತ್ ಬಾಲಕ ಬೆಳಿಗ್ಗೆ 5 ಗಂಟೆಗೆ ನಿಧನರಾದರು. ಶನಿವಾರ ರಾತ್ರಿ ಬಾಲಕನ ಸ್ಥಿತಿ ಗಂಭೀರವಾಗಿತ್ತು. ನಾವು ವಿವಿಧ ತಂಡಗಳನ್ನು ರಚಿಸಿದ್ದೇವೆ ಹಾಗೂ ಪತ್ತೆಹಚ್ಚುವಿಕೆಯನ್ನು ಆರಂಭಿಸಿದ್ದೇವೆ. ಹುಡುಗನ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪ್ರತ್ಯೇಕಿಸುವ ಕುರಿತು ಹೆಜ್ಜೆಗಳನ್ನು ಇಟ್ಟಿದ್ದೇವೆ’’ ಎಂದರು.
Next Story