ಗುಜರಾತ್: ಭೂಪೇಂದ್ರ ಪಟೇಲ್ ನೇತೃತ್ವದ ಹೊಸ ಸಚಿವ ಸಂಪುಟದ ಪ್ರಮಾಣವಚನ
photo: ANI
ಅಹಮದಾಬಾದ್: ಗುಜರಾತ್ ನ ನೂತನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನೇತೃತ್ವದ ಹೊಸ ಸಚಿವ ಸಂಪುಟವು ಗಾಂಧಿನಗರದ ರಾಜ್ ಭವನದಲ್ಲಿ ಗುರುವಾರ ಪ್ರಮಾಣವಚನ ಸ್ವೀಕರಿಸಿತು.
ವಿಜಯ್ ರೂಪಾನಿ ಸರಕಾರದಲ್ಲಿ ಮಂತ್ರಿಗಳಾಗಿದ್ದ ಹಲವರಿಗೆ ನೂತನ ಸಂಪುಟದಲ್ಲಿ ಸ್ಥಾನ ಇಲ್ಲ ಎಂದು ಮಾಹಿತಿ ನೀಡಿದ ಬಳಿಕ ಅವರು ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿಯಾಗಿದೆ. ಭಿನ್ನಮತದಿಂದಾಗಿ ಬುಧವಾರ ನಡೆಯಬೇಕಾಗಿದ್ದ ಪ್ರಮಾಣವಚನ ಇಂದಿಗೆ ಮುಂದೂಡಲಾಗಿತ್ತು.
ಹೊಸ ಸಚಿವ ಸಂಪುಟದ ಮೊದಲ ಸಭೆ ಇಂದು ಸಂಜೆ 4 ಗಂಟೆಗೆ ನಡೆಯಲಿದೆ.
ವಿಜಯ್ ರೂಪಾನಿ ಪ್ರತಿಭಟನೆಯಿಲ್ಲದೆ ರಾಜೀನಾಮೆ ನೀಡಿದ್ದರು ಹಾಗೂ ಭೂಪೇಂದ್ರ ಪಟೇಲ್ ಈ ವಾರದ ಆರಂಭದಲ್ಲಿ ಯಾವುದೇ ವಿರೋಧವಿಲ್ಲದೆ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಸಂಪುಟ ರಚನೆಯ ವೇಳೆ ಅಸಮಾಧಾನ ಹೊರಹೊಮ್ಮಿದೆ.
ಗುರುವಾರ ಮಧ್ಯಾಹ್ನ 1.30 ಕ್ಕೆ ಗಾಂಧಿನಗರದ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಿತು.
ಸ್ಪೀಕರ್ ರಾಜೇಂದ್ರ ತ್ರಿವೇದಿ ಸಹಿತ ಗುರುವಾರ 24 ಸಚಿವರು ಪ್ರಮಾಣವಚನ ಸ್ವೀಕರಿಸಿದರು.
Next Story