ಕುಸ್ತಿ ಪಂದ್ಯಾಟದ ವೇಳೆ ಕುಸ್ತಿಪಟು ಮೃತಪಟ್ಟ ಘಟನೆ: ಕುಟುಂಬದ ದೂರಿನ ಮೇರೆಗೆ ಎಫ್ ಐಆರ್ ದಾಖಲು
photo: indiatoday.in
ಮೊರಾದಾಬಾದ್ (ಉತ್ತರಪ್ರದೇಶ): ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ಅನಧಿಕೃತ ಕುಸ್ತಿ ಪಂದ್ಯಾಟದ ವೇಳೆ ಕುಸ್ತಿಪಟುವೊಬ್ಬರು ತೀವ್ರ ಸ್ವರೂಪದ ಗಾಯದಿಂದಾಗಿ ಇತ್ತೀಚೆಗೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿ ಇದೀಗ ಎಫ್ ಐಆರ್ ದಾಖಲಾಗಿದೆ.
ಈ ಕುರಿತು ಸುದ್ದಿಸಂಸ್ಥೆ ಎಎನ್ ಐಯೊಂದಿಗೆ ಮಾತನಾಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಕುಮಾರ್,"ಮೊರಾದಾಬಾದ್ ನಲ್ಲಿ ಸೆಪ್ಟಂಬರ್ 2ರಂದು ನಡೆದಿದ್ದ ಅನಧಿಕೃತ ಕುಸ್ತಿ ಪಂದ್ಯವೊಂದರಲ್ಲಿ ಕುಸ್ತಿಪಟುವೊಬ್ಬನಿಗೆ ಕುತ್ತಿಗೆಗೆ ತೀವ್ರ ಗಾಯವಾಗಿತ್ತು. ಆನಂತರ ಕುಸ್ತಿಪಟು ಮೃತಪಟ್ಟಿದ್ದು, ಪೊಲೀಸರಿಗೆ ಮಾಹಿತಿ ನೀಡದೇ ಕುಸ್ತಿಪಟುವಿನ ಅಂತ್ಯಕ್ರಿಯೆ ನಡೆಸಲಾಗಿತ್ತು. ಮೃತ ಕುಸ್ತಿಪಟುವಿನ ಕುಟುಂಬದವರು ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 34 ಎ ಅಡಿ ಎಫ್ ಐಆರ್ ದಾಖಲಿಸಲಾಗಿದೆ'' ಎಂದು ಹೇಳಿದ್ದಾರೆ.
Next Story