ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಆಸ್ಕರ್ ಪ್ರಶಸ್ತಿಯೂ ದಕ್ಕಬೇಕು ಎಂದ ಟ್ವಿಟ್ಟರಿಗರು: ಕಾರಣವೇನು ಗೊತ್ತೇ?
ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಜಾವೆಲಿನ್ ಪಟು ನೀರಜ್ ಚೋಪ್ರಾ ತಾವು ನಟನೆಗೂ ಸೈ ಎಂದೆನಿಸಿಕೊಂಡಿದ್ದಾರೆ. ಕ್ರೆಡ್ ಸಂಸ್ಥೆಯ ಜಾಹೀರಾತಿನಲ್ಲಿ ಅವರು ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಈ ವೀಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಒಂದು ಕಂಪೆನಿಯ ಬಾಸ್ ಆಗಿ, ಒಬ್ಬ ವರದಿಗಾರನಾಗಿ, ಓರ್ವ ಬ್ಯಾಂಕರ್, ಚಿತ್ರ ನಿರ್ಮಾಪಕ ಹಾಗೂ ಒಬ್ಬ ವಿದ್ಯಾರ್ಥಿಯಾಗಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡು ಲೀಲಾಜಾಲವಾಗಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಿಗರಂತೂ ಅವರ ನಟನಾ ಚಾತುರ್ಯಕ್ಕೆ ಅಚ್ಚರಿಪಟ್ಟಿದ್ದಾರೆ. ಅವರ ವೀಡಿಯೋ ಹೊರಬೀಳುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟಿಗ ವೀರೇಂದರ್ ಸೆಹ್ವಾಗ್ ʼಕ್ಯಾ ಫೇಕ್ತಾ ಹೇ ಯಾರ್ʼ ಎಂಬ ಪದ ಪ್ರಶಂಸೆಯಾಗಿ ಸಲ್ಲಬಹುದಾದ ಒಬ್ಬನೇ ವ್ಯಕ್ತಿ" ಎಂದು ಚೋಪ್ರಾ ಅವರನ್ನು ಹೊಗಳಿದ್ದಾರೆ.
ಇನ್ನೊಬ್ಬರು ಪ್ರತಿಕ್ರಿಯಿಸಿ, ಈಗಾಗಲೇ ಒಲಿಂಪಿಕ್ ಚಿನ್ನ ಗೆದ್ದ ಚೋಪ್ರಾರಿಗೆ ಈಗ ಆಸ್ಕರ್ ಕೂಡ ದೊರೆಯಬೇಕು ಎಂದು ಬರೆದಿದ್ದಾರೆ. ನೀರಜ್ ಚೋಪ್ರಾ ತಮ್ಮ ಜೀವನ ವೃತ್ತಾಂತದ ಕುರಿತಾದ ಸಿನೆಮಾದಲ್ಲಿ ತಾವೇ ನಟಿಸಬೇಕು ಎಂದು ಇನ್ನೊಬ್ಬರು ಬರೆದಿದ್ದಾರಲ್ಲದೆ ಹಲವು ಬಾಲಿವುಡ್ ಸ್ಟಾರ್ಗಳಿಗಿಂತ ಅವರು ಉತ್ತಮವಾಗಿ ನಟಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೊಬ್ಬ ಟ್ವಿಟ್ಟರಿಗರು ಟ್ವೀಟ್ ಮಾಡಿ ತಾವು ಆ ತಮಾಷೆಯಾಗಿರುವ ವೀಡಿಯೋವನ್ನು ಹತ್ತು ಬಾರಿ ನೋಡಿದ್ದು ಇನ್ನೂ ನೋಡಬೇಕೆನಿಸುತ್ತದೆ ಎಂದಿದ್ದಾರೆ.
The only Person for whom ‘Kya Fekta hai Yaar’ is a compliment- @Neeraj_chopra1 ! https://t.co/RuyWJujD0n
— Virender Sehwag (@virendersehwag) September 19, 2021
360 Degree Marketing! @cred_club #ad pic.twitter.com/RmjWAXERxm
— Neeraj Chopra (@Neeraj_chopra1) September 19, 2021
He has won Olympic gold but now give that guy an Oscar too! pic.twitter.com/kljqlrmhfz
— NEO (@MatrixKaAvenger) September 19, 2021
Bhai , Neeraj joins the rank of Dhoni - very few sportsman who r good actors too dodging the likes of Azhar, Rohit and PV Sindhu. Ladka sach me gold hai ji
— Banker Babu (@bankerbabu111) September 19, 2021
His acting is better than many bollywood stars
— Rajput (@S1Rajput2) September 19, 2021
Ye apne biopic me khud kaam kargaaa.. pic.twitter.com/c8hnZAWXbF
Cred once again hits it out of the park. And Neeraj Chopra shows his good acting skills too along with portraying various wacky characters, wow! pic.twitter.com/0ihUSK4X0f
— (@AwaaraHoon) September 19, 2021
On a lighter note just wanna say , Please don't get distracted by such things , we love to see you playing with your Javlin rather than doing acting
— itsmahi (@MahimaNirala) September 19, 2021
@Neeraj_chopra1