ಅಶ್ಲೀಲ ಚಿತ್ರ ತಯಾರಿ ಪ್ರಕರಣ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಜಾಮೀನು
ಮುಂಬೈ: ಅಶ್ಲೀಲ ಚಿತ್ರ ತಯಾರಿ ಪ್ರಕರಣದಲ್ಲಿ ಬಂಧನಕ್ಕೊಳಗಾದ 2 ತಿಂಗಳ ಬಳಿಕ ಉದ್ಯಮಿ ಹಾಗೂ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರಿಗೆ 50,000 ರೂ. ಶ್ಯೂರಿಟಿ ಮೇಲೆ ಮುಂಬೈ ನ್ಯಾಯಾಲಯ ಇಂದು ಜಾಮೀನು ನೀಡಿದೆ ಎಂದು NDTV ವರದಿ ಮಾಡಿದೆ.
2009 ರಲ್ಲಿ ಶಿಲ್ಪಾ ಶೆಟ್ಟಿಯವರನ್ನು ಮದುವೆಯಾದ ಉದ್ಯಮಿಯ ವಿರುದ್ಧ ಕಳೆದ ಗುರುವಾರ ಮುಂಬೈ ಪೊಲೀಸರು 1,400 ಪುಟಗಳ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಜಾಮೀನು ಕೋರಿ ಶನಿವಾರ ಅರ್ಜಿ ಸಲ್ಲಿಸಿದ್ದ ರಾಜ್ ಕುಂದ್ರಾ ತನ್ನನ್ನು 'ಬಲಿಪಶು' ಮಾಡಲಾಗುತ್ತಿದೆ ಹಾಗೂ 'ಚಾರ್ಜ್ ಶೀಟ್ ನಲ್ಲಿ ತಾನು ಅಶ್ಲೀಲ ಚಿತ್ರವನ್ನು ರಚಿಸುವಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಾದಿಸಿದರು.
Next Story