ಅಮೆರಿಕ ಪ್ರವಾಸ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ
photo: ANI
ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ದಿಲ್ಲಿಯಿಂದ ಅಮೆರಿಕಕ್ಕೆ ಪ್ರವಾಸ ಕೈಗೊಂಡರು.
ಕೋವಿಡ್ -19 ಬಳಿಕ ಇದು ಅವರ ಮೊದಲ ಅಮೆರಿಕಾ ಪ್ರವಾಸವಾಗಿದೆ. ಅಮೆರಿಕದ ಭೇಟಿಯ ವೇಳೆ ಅಧ್ಯಕ್ಷ ಜೋ ಬೈಡನ್ ಅವರನ್ನು ಮೊದಲ ಬಾರಿ ಭೇಟಿಯಾಗಲಿದ್ದಾರೆ. ಅಮೆರಿಕದ ಉನ್ನತ ಸಂಸ್ಥೆಗಳ ಸಿಇಒಗಳ ಜೊತೆ ಸಭೆ ನಡೆಸಲಿದ್ದಾರೆ. ಕ್ವಾಡ್ ದೇಶಗಳ ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ. ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಅಲ್ಲದೆ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ಮೋದಿ ಸೆಪ್ಟಂಬರ್ 26ರಂದು ದೇಶಕ್ಕೆ ವಾಪಸಾಗಲಿದ್ದಾರೆ.
PM Narendra Modi departs from New Delhi for his visit to US where he will attend the first in-person Quad Leaders’ Summit, hold bilateral meetings, and address United Nations General Assembly pic.twitter.com/325vac5pK9
— ANI (@ANI) September 22, 2021
Next Story