ಮಧ್ಯಪ್ರದೇಶ: ಬಸ್-ಡಂಪರ್ ಡಿಕ್ಕಿ ಏಳು ಮಂದಿ ಮೃತ್ಯು, 13 ಮಂದಿಗೆ ಗಾಯ
Photo: Twitter/ANI
ಭಿಂಡ್: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಗೋಹಡ್ ಪಟ್ಟಣದ ಬಳಿ ಡಂಪರ್ ಟ್ರಕ್ಗೆ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ಬಸ್ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಳಿಗ್ಗೆ 8 ಗಂಟೆ ಸುಮಾರಿಗೆ ಗ್ವಾಲಿಯರ್ನಿಂದ ಇಟಾವಾಕ್ಕೆ ತೆರಳುತ್ತಿದ್ದ ಬಸ್ ಡಂಪರ್ಗೆ ಡಿಕ್ಕಿ ಹೊಡೆದಿದೆ ಎಂದು ಹೆಚ್ಚುವರಿ ಎಸ್ಪಿ ಕಮಲೇಶ್ ಖರ್ಪುಸೆ ತಿಳಿಸಿದ್ದಾರೆ.
ಗೋಹಡ್ ಪೊಲೀಸ್ ಠಾಣೆ ವ್ಯಾಪ್ತಿಯ ಹರಗೋವಿಂದಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು.
ಗಾಯಗೊಂಡವರನ್ನು ಚಿಕಿತ್ಸೆಗಾಗಿ ಗ್ವಾಲಿಯರ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ಹೇಳಿದರು.
Next Story