ಹುದ್ದೆ ಇರಲಿ, ಇಲ್ಲದಿರಲಿ ರಾಹುಲ್ , ಪ್ರಿಯಾಂಕಾ ಗಾಂಧಿ ಪರ ನಿಲ್ಲುತ್ತೇನೆ: ನವಜೋತ್ ಸಿಧು
ಹೊಸದಿಲ್ಲಿ: "ಪೋಸ್ಟ್ ಇರಲಿ ಅಥವಾ ಇಲ್ಲದೇ ಇರಲಿ ... ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪರವಾಗಿ ನಿಲ್ಲುತ್ತೇನೆ" ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿರುವ ನವಜೋತ್ ಸಿಧು ಘೋಷಿಸಿದರು.
"ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ತತ್ವಗಳನ್ನು ಎತ್ತಿಹಿಡಿಯುವುದಾಗಿ" ಪ್ರತಿಜ್ಞೆ ಮಾಡಿದ ಸಿಧು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ತಮ್ಮ ಬದ್ಧತೆಯನ್ನು ಸೂಚಿಸಿದರು.
"ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ತತ್ವಗಳನ್ನು ಎತ್ತಿಹಿಡಿಯುವೆ ... ಹುದ್ದೆ ಇರಲಿ ಅಥವಾ ಹುದ್ದೆ ಇಲ್ಲದಿರಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರ ಪರವಾಗಿ ನಿಲ್ಲುವೆ. ಎಲ್ಲ ಋಣಾತ್ಮಕ ಶಕ್ತಿಗಳೊಂದಿಗೆ ನನ್ನನ್ನುಸೋಲಿಸಲು ಪ್ರಯತ್ನಿಸಿ. ಆದರೆ ಪ್ರತಿ ಸಕಾರಾತ್ಮಕ ಶಕ್ತಿಯಿಂದ ಪಂಜಾಬ್ ಅನ್ನು ಗೆಲ್ಲಲಾಗುವುದು'' ಎಂದು ಅವರು ಟ್ವೀಟ್ ಮಾಡಿದ್ದಾರೆ.
Will uphold principles of Gandhi Ji & Shastri Ji … Post or No Post will stand by @RahulGandhi & @priyankagandhi ! Let all negative forces try to defeat me, but with every ounce of positive energy will make Punjab win, Punjabiyat (Universal Brotherhood) win & every punjabi win !! pic.twitter.com/6r4pYte06E
— Navjot Singh Sidhu (@sherryontopp) October 2, 2021