ಅಸ್ಸಾಂ ಕಾಂಗ್ರೆಸ್ ಶಾಸಕನನ್ನು ಮನೆಯಿಂದ ಬಂಧಿಸಿದ ಪೊಲೀಸರು
photo: ANI
ಗುವಾಹಟಿ: ರಾಜ್ಯದಲ್ಲಿ ಕಳೆದ ವಾರ ಹಿಂಸಾತ್ಮಕ ತೆರವು ಕಾರ್ಯಾಚರಣೆಯನ್ನು ಉಲ್ಲೇಖಿಸಿ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿರುವ ಆರೋಪದಲ್ಲಿ ಅಸ್ಸಾಂ ಕಾಂಗ್ರೆಸ್ ಶಾಸಕ ಶರ್ಮನ್ ಅಲಿ ಅಹ್ಮದ್ ಅವರನ್ನು ಅವರ ನಿವಾಸದಿಂದ ಶನಿವಾರ ಸಂಜೆ ಬಂಧಿಸಲಾಗಿದೆ ಎಂದು NDTV ವರದಿ ಮಾಡಿದೆ.
ಕಳೆದ ವಾರ ತೆರವು ಕಾರ್ಯಾಚರಣೆ ನಡೆದ ದರ್ರಾಂಗ್ ಜಿಲ್ಲೆಯಲ್ಲಿ ಸುಮಾರು 40 ವರ್ಷಗಳ ಹಿಂದೆ 8 ಜನರನ್ನು ಹತ್ಯೆಗೈದಿರುವುದನ್ನು ಸಮರ್ಥಿಸಿಕೊಂಡಿದ್ದಕ್ಕೆ ಬಾಘ್ ಬರ್ ನಿಂದ ಮೂರು ಬಾರಿ ಚುನಾಯಿತರಾಗಿರುವ ಅಹ್ಮದ್ ಅವರಿಗೆ ಕಾಂಗ್ರೆಸ್ ಶೋಕಾಸ್ ನೋಟಿಸ್ ನೀಡಿದ ಮರುದಿನ ಬಂಧನ ನಡೆದಿದೆ.
ಅಹ್ಮದ್ ಅವರ ಹೇಳಿಕೆಗೆ ಆಸ್ಸಾಂನಾದ್ಯಂತ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿತ್ತು.
Next Story