ಕೇಂದ್ರದಿಂದ ಕೋವಿಡ್ ಲಸಿಕೆಯ 100 ಕೋಟಿ ಡೋಸ್ ಪೂರೈಕೆ
ಹೊಸದಿಲ್ಲಿ, ಅ. 15: ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ ಕೋವಿಡ್ ಲಸಿಕೆಯ 100 ಕೋಟಿಗೂ ಅಧಿಕ ಡೋಸ್ಗಳನ್ನು ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 10.53 ಕೋಟಿಗೂ ಅಧಿಕ (10,53,11,155) ಡೋಸ್ಗಳು ಬಳಕೆಯಾಗದೆ ಉಳಿದಿವೆ ಎಂದು ಅದು ತಿಳಿಸಿದೆ.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆಗಳು ಲಭ್ಯವಿರುವ ಬಗ್ಗೆ ಮುಂಚಿತವಾಗಿ ತಿಳಿಯುವುದರಿಂದ ಲಸಿಕೆಗಳ ಪೂರೈಕೆಗೆ ಉತ್ತಮ ಯೋಜನೆ ರೂಪಿಸಲು ಹಾಗೂ ಲಸಿಕೆ ಪೂರೈಕೆಯ ಸರಪಣಿಯನ್ನು ವ್ಯವಸ್ಥಿತಗೊಳಿಸಲು ಸಾಧ್ಯ. ಇದರಿಂದ ಕೋವಿಡ್ ಲಸಿಕಾ ಅಭಿಯಾನ ತೀವ್ರಗೊಳಿಸಬಹುದು ಎಂದು ಅದು ಹೇಳಿದೆ. ರಾಷ್ಟ್ರಮಟ್ಟದ ಲಸಿಕೀಕರಣದ ಭಾಗವಾಗಿ ಕೇಂದ್ರ ಸರಕಾರ ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುತ್ತಿದೆ.
Next Story