ಬಾಲಿವುಡ್ ನ ಹಿರಿಯ ನಟಿ ಫಾರೂಖ್ ಜಾಫರ್ ನಿಧನ
photo:Twitter/
ಹೊಸದಿಲ್ಲಿ: ಇತ್ತೀಚೆಗೆ ಗುಲಾಬೊ ಸೀತಾಬೊದಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸಿದ್ದ ಬಾಲಿವುಡ್ ನ ನಟಿ ಫಾರೂಖ್ ಜಾಫರ್ ಶುಕ್ರವಾರ ಲಕ್ನೋದಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಜಾಫರ್ ಮೊಮ್ಮಗ ಶಾಝ್ ಅಹ್ಮದ್ ಟ್ವಿಟ್ಟರ್ ನಲ್ಲಿ ಸುದ್ದಿ ಹಂಚಿಕೊಂಡಿದ್ದಾರೆ.
"ನನ್ನ ಅಜ್ಜಿ ಮತ್ತು ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಎಂಎಲ್ಸಿ ಎಸ್ಎಂ ಜಾಫರ್ ಅವರ ಪತ್ನಿ, ಹಿರಿಯ ನಟಿ ಫಾರೂಖ್ ಜಾಫರ್ ಇಂದು ಸಂಜೆ 7 ಗಂಟೆಗೆ ಲಕ್ನೋದಲ್ಲಿ ನಿಧನರಾದರು'' ಎಂದು ಟ್ವೀಟಿಸಿದರು.
ಫಾರೂಖ್ ಜಾಫರ್ 1933 ರಲ್ಲಿ ಜೌಂದಪುರದಲ್ಲಿ ಜಮೀನ್ದಾರ್ ಕುಟುಂಬದಲ್ಲಿ ಜನಿಸಿದರು. ಪತ್ರಕರ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸೈಯದ್ ಮುಹಮ್ಮದ್ ಜಾಫರ್ ಅವರನ್ನು ಮದುವೆಯಾದ ನಂತರ ಅವರು 16 ನೇ ವಯಸ್ಸಿನಲ್ಲಿ ಲಕ್ನೋಗೆ ತೆರಳಿದರು. ಪತಿಯ ಸಹಕಾರದಿಂದ ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
Next Story