ನಾಲ್ಕು ವಾರಗಳ ನಂತರ ಜೈಲಿನಿಂದ ಹೊರ ಬಂದ ಆರ್ಯನ್ ಖಾನ್
ಮುಂಬೈ/ಹೊಸದಿಲ್ಲಿ: ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ಸುಮಾರು ನಾಲ್ಕು ವಾರಗಳ ನಂತರ ಇಂದು ಮುಂಬೈ ಜೈಲಿನಿಂದ ಹೊರ ಬಂದಿದ್ದಾರೆ. ಡ್ರಗ್ಸ್-ಆನ್ ಕ್ರೂಸ್ ಪ್ರಕರಣದಲ್ಲಿ 23 ವರ್ಷದ ಆರ್ಯನ್ ಖಾನ್ ಗೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ನೀಡಿತು. ಜಾಮೀನು ಪ್ರಕ್ರಿಯೆ ವಿಳಂಬವಾಗಿದ್ದರಿಂದ ಇನ್ನೂ ಎರಡು ರಾತ್ರಿ ಜೈಲಿನಲ್ಲಿ ಕಳೆಯುವಂತಾಯಿತು.
ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಭದ್ರತಾ ಸಿಬ್ಬಂದಿಯಿಂದ ಸುತ್ತುವರಿದಿದ್ದ ಆರ್ಯನ್ ತನಗಾಗಿ ಕಾಯುತ್ತಿದ್ದ ಬಿಳಿ ರೇಂಜ್ ರೋವರ್ನ್ನು ಏರಿ ಮನೆಯತ್ತ ತೆರಳಿದರು.
ಇಂದು ಮುಂಜಾನೆ ಆರ್ಥರ್ ರೋಡ್ ಜೈಲು ಅಧಿಕಾರಿಗಳು "ಜಾಮೀನು ಪೆಟ್ಟಿಗೆ" ಯಿಂದ ಜಾಮೀನು ಪತ್ರಗಳನ್ನು ಹೊರತೆಗೆದು ಸ್ಟಾರ್ ಮಗನ ಬಿಡುಗಡೆಯ ಪ್ರಕ್ರಿಯೆಯನ್ನು ಆರಂಭಿಸಿದರು.
ಬೆಳಿಗ್ಗೆಯಿಂದಲೇ ಶಾರುಖ್ ಖಾನ್ ಅವರ ಮನ್ನತ್ ಮನೆಯ ಹೊರಗೆ ಅಭಿಮಾನಿಗಳು "ವೆಲ್ಕಮ್ ಹೋಮ್, ಆರ್ಯನ್" ಪೋಸ್ಟರ್ಗಳೊಂದಿಗೆ ನೆರೆದಿದ್ದರು.
ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಆರ್ಯನ್ ಖಾನ್ ಅವರ ಜಾಮೀನಿಗಾಗಿ ಮೂರು ದಿನಗಳ ಕಾಲ ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದರು.