ಅಕ್ಟೋಬರ್ ನಿಂದ ನಾಪತ್ತೆಯಾಗಿದ್ದ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಕ್ರೈಮ್ ಬ್ರಾಂಚ್ ಮುಂದೆ ಹಾಜರು
ಮುಂಬೈ: ನಾಲ್ಕು ಸುಲಿಗೆ ಪ್ರಕರಣಗಳನ್ನು ಎದುರಿಸುತ್ತಿರುವ ಹಾಗೂ ಅಕ್ಟೋಬರ್ನಿಂದ ನಾಪತ್ತೆಯಾಗಿದ್ದ, ದೇಶದಿಂದ ಪಲಾಯನ ಮಾಡಿದ್ದಾರೆ ಎಂಬ ವದಂತಿಗಳಿಗೆ ಕಾರಣವಾಗಿದ್ದ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಗುರುವಾರ ಅಪರಾಧ ವಿಭಾಗದ ಕಚೇರಿಗಳಿಗೆ ಹಾಜರಾಗಿದ್ದಾರೆ.
"ನ್ಯಾಯಾಲಯದ ನಿರ್ದೇಶನದಂತೆ ನಾನು ತನಿಖೆಗೆ ಹಾಜರಾಗುತ್ತೇನೆ" ಎಂದು ಸಿಂಗ್ ಅವರು ಇಂದು ಮುಂಜಾನೆ ಚಂಡೀಗಢದಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.
ತಮ್ಮ ಕಕ್ಷಿದಾರರು ತಲೆಮರೆಸಿಕೊಂಡಿಲ್ಲ. ಭಾರತದಲ್ಲಿದ್ದಾರೆ ಎಂದು ಮಾಜಿ ಮುಂಬೈ ಪೊಲೀಸ್ ಕಮಿಷನರ್ ಸಿಂಗ್ ಅವರ ವಕೀಲರು ಸುಪ್ರೀಂ ಕೋರ್ಟ್ಗೆ ಸೋಮವಾರ ತಿಳಿಸಿದರು.
ಸಿಂಗ್ ಅವರಿಗೆ ಬಂಧನದಿಂದ ರಕ್ಷಣೆ ಒದಗಿಸಿದ ಸುಪ್ರೀಂ ಕೋರ್ಟ್ ತಮ್ಮ ವಿರುದ್ಧದ ಸುಲಿಗೆ ಆರೋಪಗಳ ತನಿಖೆಗೆ ನೆರವಾಗುವಂತೆ ಸೂಚಿತ್ತು.
Next Story