ಕೋಲ್ಕತ್ತಾದಲ್ಲಿ ಉದ್ಯಮಿ ಗೌತಮ್ ಅದಾನಿಯನ್ನು ಭೇಟಿಯಾದ ಮಮತಾ ಬ್ಯಾನರ್ಜಿ
Photo: twitter
ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಕೋಲ್ಕತ್ತಾದ ರಾಜ್ಯ ಸಚಿವಾಲಯ 'ನಬನ್ನಾ'ದಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರನ್ನು ಭೇಟಿಯಾದರು.
ಪಶ್ಚಿಮ ಬಂಗಾಳದಲ್ಲಿ ಅದಾನಿಯ ವಿಶಾಲ ವ್ಯಾಪಾರ ಸಾಮ್ರಾಜ್ಯದ ಹೂಡಿಕೆಯ ಆಯ್ಕೆಗಳನ್ನು ಇಬ್ಬರೂ ಚರ್ಚಿಸಿದರು ಎಂದು ತಿಳಿದುಬಂದಿದೆ.
ಮುಂದಿನ ವರ್ಷ ಎಪ್ರಿಲ್ನಲ್ಲಿ ಬೆಂಗಾಳ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವುದಾಗಿ ಅದಾನಿ ದೃಢಪಡಿಸಿದರು.
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಇಬ್ಬರ ಸಭೆ ಒಂದೂವರೆ ಗಂಟೆಗಳ ಕಾಲ ನಡೆಯಿತು.
“ಮಾನ್ಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲು ಸಂತೋಷವಾಯಿತು. ವಿವಿಧ ಹೂಡಿಕೆ ಸನ್ನಿವೇಶಗಳು ಹಾಗೂ ಪಶ್ಚಿಮ ಬಂಗಾಳದ ಪ್ರಬಲ ಸಾಮರ್ಥ್ಯವನ್ನು ಚರ್ಚಿಸಲಾಗಿದೆ. ನಾನು ಎಪ್ರಿಲ್ 2022 ರಲ್ಲಿ ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಗೆ (ಬಿಜಿಬಿಎಸ್) ಹಾಜರಾಗಲು ಎದುರು ನೋಡುತ್ತಿದ್ದೇನೆ’’ಎಂದು ಅದಾನಿ ಟ್ವೀಟಿಸಿದರು.
Delighted to meet @MamataOfficial, Hon'ble Chief Minister Mamata Banerjee.
— Gautam Adani (@gautam_adani) December 2, 2021
Discussed different investment scenarios and the tremendous potential of West Bengal. I look forward to attending the Bengal Global Business Summit (BGBS) in April 2022. pic.twitter.com/KGhFRJYOA4