ಡಿ. 20ರಿಂದ ವಾರಕ್ಕೆ ನಾಲ್ಕು ಬಾರಿ ಬೆಳಗಾವಿ-ದೆಹಲಿ ವಿಮಾನ
ಬೆಳಗಾವಿ: ಈ ತಿಂಗಳ 20ರಿಂದ ವಾರಕ್ಕೆ ನಾಲ್ಕು ಬಾರಿ ಬೆಳಗಾವಿ ಮತ್ತು ದೆಹಲಿ ನಡುವೆ ವಿಮಾನಯಾನ ಸೇವೆಯನ್ನು ಸ್ಪೈಸ್ಜೆಟ್ ಆರಂಭಿಸಲಿದೆ.
ಇದುವರೆಗೆ ಗುರುಗ್ರಾಮ ಮೂಲದ ಏರ್ಲೈನ್ಸ್ ಸಂಸ್ಥೆ ವಾರಕ್ಕೆ ಮೂರು ಬಾರಿ ಈ ಸೇವೆ ಒದಗಿಸುತ್ತಿತ್ತು. ಇನ್ನು ಮುಂದೆ ಸೋಮವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ ವಾಯು ಸಂಪರ್ಕ ಸೇವೆಯನ್ನು ಒದಗಿಸಲಿದೆ ಎಂದು ಸ್ಪೈಸ್ಜೆಟ್ ಹೇಳಿದ್ದಾಗಿ ಬೆಳಗಾವಿ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.
ಕಳೆದ ಆಗಸ್ಟ್ 13ರಂದು ರಾಜಧಾನಿ ದೆಹಲಿ ಜತೆ ನೇರ ಸಂಪರ್ಕ ಕಲ್ಪಿಸುವ ಕಡಿಮೆ ವೆಚ್ಚದ ಏರ್ಲೈನ್ ಸೇವೆಯಾಗಿ ಬೋಯಿಂಗ್ 737-700 ವಿಮಾನಯಾನ ಸೇವೆ ಆರಂಭಿಸಲಾಗಿತ್ತು. ಆರಂಭದಿಂದ ಇದುವರೆಗೂ ಆಗಮನ ಹಾಗೂ ನಿರ್ಗಮನ ವಿಮಾನಗಳು ಬಹುತೇಕ ಭರ್ತಿಯಾಗುತ್ತಿವೆ. ಪ್ರಸ್ತುತ ಈ ವಿಮಾನ ಬೆಳಿಗ್ಗೆ 6.35ಕ್ಕೆ ದೆಹಲಿಯಿಂದ ಹೊರಟು 9.30ಕ್ಕೆ ಬೆಳಗಾವಿಗೆ ಆಗಮಿಸುತ್ತದೆ. ಬಳಿಕ 10 ಗಂಟೆಗೆ ಬೆಳಗಾವಿಯಿಂದ ಹೊರಟು 12.30ಕ್ಕೆ ದೆಹಲಿ ತಲುಪುತ್ತದೆ.
Next Story