ಉಮರ್ ಖಾಲಿದ್ ಮಿತ್ರ ಎಂದಿದ್ದಕ್ಕೆ 'ಯಾರು ಹೇಳಿದ್ದು' ಎಂದು ಕೇಳಿದ ಕನ್ಹಯ್ಯ
"ಬೆನ್ನಿಗೆ ಇರಿಯುವ ವಂಚಕ" ಎಂದು ಜನರ ಆಕ್ರೋಶ
Photo: Twitter
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಮತ್ತು ಮಾಜಿ ವಿದ್ಯಾರ್ಥಿ ಹೋರಾಟಗಾರ ಕನ್ಹಯ್ಯ ಕುಮಾರ್ ಅವರ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಅವರು ಜೈಲಿನಲ್ಲಿರುವ ಹೋರಾಟಗಾರರಾದ ಉಮರ್ ಖಾಲಿದ್ ಹಾಗೂ ಮೀರನ್ ಹೈದರ್ ಬಗ್ಗೆ ಪತ್ರಕರ್ತನ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಕಾಣಬಹುದು.
ಕುಮಾರ್ ಬಿಹಾರದ ಶಿವಾನ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಪತ್ರಕರ್ತರೊಬ್ಬರು ಇಬ್ಬರು ವಿದ್ಯಾರ್ಥಿ ಹೋರಾಟಗಾರರ ಬಗ್ಗೆ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ಕುಮಾರ್ ಅವರು "ಮೀರನ್ ಹೈದರ್ ನನ್ನ ಪಕ್ಷಕ್ಕೆ ಸೇರಿದವರಾ?" ಎಂದು ಕೇಳುತ್ತಾರೆ.
ಅವರು ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ದಲ್ಲಿದ್ದಾರೆ ಎಂದು ವರದಿಗಾರ ಕುಮಾರ್ ಗೆ ಹೇಳಿದಾಗ, "ಹಾಗಾದರೆ ನೀವು ಅವರ ಬಗ್ಗೆ ನನ್ನನ್ನು ಏಕೆ ಕೇಳುತ್ತಿದ್ದೀರಿ?" ಎಂದು ಕೇಳುತ್ತಾರೆ.
ಆಗ ವರದಿಗಾರ ಕುಮಾರ್ ಗೆ ಉಮರ್ ಖಾಲಿದ್ ಈ ಹಿಂದೆ ನಿಮ್ಮ ಸ್ನೇಹಿತ ಹಾಗೂ ಪರಿಚಯದವನಾಗಿದ್ದ ಎಂದು ಹೇಳುತ್ತಾರೆ. ಅದಕ್ಕೆ ಕುಮಾರ್ "ನಿಮಗೆ ಯಾರು ಹೇಳಿದರು?" ಎಂದು ಪ್ರಶ್ನಿಸಿದ್ದಾರೆ. ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಕನ್ಹಯ್ಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಕನ್ಹಯ್ಯ ಅವರನ್ನು ಟ್ವಿಟ್ಟರಿಗರೊಬ್ಬರು "ಬೆನ್ನಿಗೆ ಇರಿಯುವ ವಂಚಕ" ಎಂದು ಟೀಕಿಸಿದ್ದಾರೆ. ಹಲವಾರು ಮಂದಿ ಕನ್ಹಯ್ಯ ಮತ್ತು ಉಮರ್ ಖಾಲಿದ್ ಒಟ್ಟಿಗೆ ಇರುವ ಪೋಟೋಗಳನ್ನು ಟ್ವೀಟ್ ಮಾಡಿ ಕನ್ಹಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
2016 ರಲ್ಲಿ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಕುರಿತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ನಡೆದ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಮತ್ತು ಕನ್ಹಯ್ಯ ಕುಮಾರ್ ಮುಂಚೂಣಿಯಲ್ಲಿದ್ದರು.
ಉಮರ್ ಖಾಲಿದ್ ಅವರೊಂದಿಗಿನ ತಮ್ಮ ನಂಟನ್ನು ಮರೆತಿರುವ ಕನ್ಹಯ್ಯ ಕುಮಾರ್ ಅವರನ್ನು ಹಲವು ಜನರು ಹಾಗೂ ಹೋರಾಟಗಾರರು ಟ್ವಿಟರ್ ನಲ್ಲಿ ಟೀಕಿಸಿದ್ದಾರೆ.
पत्रकार : उमर खालिद आप के दोस्त हैं
— Ashraf Hussain (@AshrafFem) December 20, 2021
कन्हैया कुमार : कौन बताया…?
वीडियो: Nadeem alag Andaaz pic.twitter.com/PEeBGNqYpv
Hey @kanhaiyakumar let me tell you @UmarKhalidJNU wouldn’t want to be friends with you.
— Safoora Zargar (@SafooraZargar) December 20, 2021
Plz join the BJP/RSS soon so that u don’t have to even PRETEND to be secular anymore. Would be a lot easier for you. You ll also win the seat u r so desperate for.
— Shad Roaman (@Bihari_Ladka57) December 20, 2021
One should feel proud to call Umar Khalid his friend, for not many would stand for justice and dignity like he did and is currently doing being in jail on false charges. Umar Khalid is our leader and we are proud of him.
— Kawalpreet Kaur (@kawalpreetdu) December 20, 2021
A friend who abandons you in your tough times is no less than a backstabber. He’s worse than an upfront enemy. Kanhaiya Kumar, the selfish, opportunistic coward didn’t deserve Umar Khalid’s friendship. Good riddance for Umar. And a lesson learnt for Muslims. We are in this alone. https://t.co/xMJJzPtzCD
— Irena Akbar (@irenaakbar) December 20, 2021
Kanhaiya K disowning Umar Khalid is the saddest thing I read today
— Mahua/ মহুয়া (@mahuadey20) December 21, 2021
umar khalid is my friend i miss him and hope he’s out soon because he’s innocent and has been stitched up by amit and modi and a shameless and complicit police and judiciary @UmarKhalidJNU
— Aakar Patel (@Aakar__Patel) December 20, 2021
Kanhaiya Kumar Bhumihar has used Rohith Vemula institutional murder to make his own political career. Now he don’t know who is Umar Khalid.
— Harsh (@_ambedkarite) December 20, 2021
Shame to all those savarna journalists and activists who has supported him over the dalit and muslim leadership.