ದಿಲ್ಲಿಯ ಎಲ್ಲಾ ಖಾಸಗಿ ಕಚೇರಿಗಳು ಬಂದ್, ಮನೆಯಿಂದ ಕೆಲಸ ಮಾಡಲು ಡಿಡಿಎಂಎ ಸೂಚನೆ
ಹೊಸದಿಲ್ಲಿ: ಕೊರೋನ ಪ್ರಕರಣಗಳ ಉಲ್ಬಣವನ್ನು ನಿಭಾಯಿಸಲು ಹೊಸ ಕೋವಿಡ್ ನಿಯಮಗಳ ಪ್ರಕಾರ ದಿಲ್ಲಿಯ ಎಲ್ಲಾ ಖಾಸಗಿ ಕಚೇರಿಗಳ ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡಲು ಕಳುಹಿಸಬೇಕಾಗಿದೆ. ಅಗತ್ಯ ಸೇವೆಗಳೆಂದು ಪರಿಗಣಿಸಲಾದ ಕಚೇರಿಗಳಿಗೆ ಮಾತ್ರ ವಿನಾಯಿತಿ ನೀಡಲಾಗುತ್ತದೆ.
ಇಲ್ಲಿಯ ತನಕ ಕಚೇರಿಗಳು ತಮ್ಮ ಅರ್ಧದಷ್ಟು ಉದ್ಯೋಗಿಗಳೊಂದಿಗೆ ಕಚೇರಿಯಲ್ಲಿ ಹಾಗೂ ಉಳಿದವರು ಮನೆಯಲ್ಲಿ ಕಾರ್ಯನಿರ್ವಹಿಸುವಂತೆ ಕೇಳಿಕೊಳ್ಳಲಾಗಿತ್ತು.
ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಈ ನಿರ್ಧಾರವನ್ನು ತೆಗೆದುಕೊಂಡಿದೆ.
ನಿನ್ನೆ ರೆಸ್ಟೋರೆಂಟ್ ಹಾಗೂ ಬಾರ್ ಗಳನ್ನು ಮುಚ್ಚಿದ್ದ ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ, ಹೋಮ್ ಡೆಲಿವರಿಯನ್ನು ಮಾತ್ರ ಅನುಮತಿಸಲಾಗುವುದು ಎಂದು ಹೇಳಿತ್ತು.
Next Story