ಹಿಂದೂ ಧರ್ಮಕ್ಕೆ ಅಧಿಕೃತವಾಗಿ ಮತಾಂತರಗೊಂಡು ಹೆಸರು ಬದಲಾಯಿಸಿದ ನಿರ್ದೇಶಕ ಅಲಿ ಅಕ್ಬರ್
ತಿರುವನಂತಪುರ: ನಾನು ಇಸ್ಲಾಂ ಧರ್ಮವನ್ನು ತ್ಯಜಿಸಿದ್ದೇನೆ ಎಂದು ನಿರ್ದೇಶಕ ಅಲಿ ಅಕ್ಬರ್ ಇತ್ತೀಚೆಗೆ ತನ್ನ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹೇಳಿದ್ದಾರೆ. ತನ್ನ ಹೆಸರನ್ನು ರಾಮಸಿಂಹನ್ ಎಂದು ಇಟ್ಟುಕೊಳ್ಳುವುದಾಗಿ ಹೇಳಿದ್ದಾರೆ. ಅಲಿ ಅಕ್ಬರ್ ಪತ್ನಿ ಲೂಸಿಯಮ್ಮ ಕೂಡಾ ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು KerlaKaumudy ವರದಿ ಮಾಡಿದೆ.
ನಿರ್ದೇಶಕ ಅಕ್ಬರ್ ಅಲಿ ಇದೀಗ ಅಧಿಕೃತವಾಗಿ ಹಿಂದೂಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ಅಂತರ್ ರಾಷ್ಟ್ರೀಯ ಹಿಂದೂ ಪರಿಷದ್ ನ ಮಾಜಿ ನಾಯಕ ಹಾಗೂ ಹಿಂದೂ ಸೇವಾ ಕೇಂದ್ರದ ನಾಯಕ ಪ್ರತೀಶ್ ವಿಶ್ವನಾಥ್ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
"ಇತಿಹಾಸ ಮರುಕಳಿಸಿದೆ. ಅಲಿ ಅಕ್ಬರ್ ಇದೀಗ ರಾಮಸಿಂಹನ್ ಆಗಿದ್ದಾರೆ. ರಾಮ ಸಿಂಹನ್ ಹೋಮ ಕುಂಡದ ಮುಂದೆ ಜನಿವಾರ ಧರಿಸಿ, ಕುತ್ತಿಗೆಯಲ್ಲಿ ಕೇಸರಿ ಶಾಲು ಹಾಕಿಕೊಂಡಿದ್ದಾರೆ" ಎಂದು ಚಿತ್ರ ಸಹಿತ ಪ್ರತೀಶ್ ಪೋಸ್ಟ್ ಮಾಡಿದ್ದಾರೆ.
Next Story