ಉತ್ತರಪ್ರದೇಶ: ರೋಡ್ ಶೋ ವೇಳೆ ಮುಖಾಮುಖಿಯಾಗಿ ಪರಸ್ಪರ ಕೈ ಬೀಸಿದ ಅಖಿಲೇಶ್ ಯಾದವ್-ಪ್ರಿಯಾಂಕಾ ಗಾಂಧಿ
Photo: Twitter/@yadavakhilesh
ಹೊಸದಿಲ್ಲಿ: ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಮತದಾನಕ್ಕೆ ಕೆಲವು ದಿನಗಳ ಮೊದಲು ಅಖಿಲೇಶ್ ಯಾದವ್ (Akhilesh Yadav) ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi) ಅವರು ಗುರುವಾರ ರೋಡ್ಶೋಗಳನ್ನು ನಡೆಸುತ್ತಿದ್ದಾಗ ಮುಖಾಮುಖಿಯಾಗಿ ಪರಸ್ಪರ ಕೈ ಬೀಸಿದರು.
ವೀಡಿಯೋವೊಂದರಲ್ಲಿ ಪ್ರಿಯಾಂಕಾ ಗಾಂಧಿಯವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಯಾದವ್ ರತ್ತ ನೋಡಿ ನಗುತ್ತಿರುವುದು ಹಾಗೂ ಕೈಬೀಸುತ್ತಿರುವುದು ಕಂಡು ಬಂದಿದೆ. ಯಾದವ್ ಅವರು ರಥ ಅಥವಾ ಪ್ರಚಾರದ ಬಸ್ನಲ್ಲಿ ತಮ್ಮ ಮಿತ್ರರಾದ ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಮುಖ್ಯಸ್ಥ ಜಯಂತ್ ಚೌಧರಿ ಅವರೊಂದಿಗೆ ಪ್ರಯಾಣಿಸುತ್ತಿದ್ದರು. ಯಾದವ್ ಕೂಡ ಬಸ್ಸಿನ ಮೇಲ್ಛಾವಣಿ ಏರಿ ಕಾಂಗ್ರೆಸ್ ನಾಯಕಿಯತ್ತ ಕೈ ಬೀಸಿದರು.
ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ನ ಕಾರ್ಯಕರ್ತರು ಮತ್ತು ಬೆಂಬಲಿಗರು ಪರಸ್ಪರ ತಮ್ಮ ಧ್ವಜಗಳನ್ನು ಹಾರಿಸುತ್ತಾ ಹುರಿದುಂಬಿಸುತ್ತಿರುವುದು ಕಂಡುಬಂತು.
ಅಖಿಲೇಶ್ ಯಾದವ್ ಅವರು ಟ್ವಿಟರ್ನಲ್ಲಿ ಪರಸ್ಪರ ಮುಖಾಮುಖಿಯಾದ ಫೋಟೋವನ್ನು ಹಂಚಿಕೊಂಡಿದ್ದಾರೆ. "ಏಕ್ ದುವಾ ಸಲಾಮ್ - ತಹಝೀಬ್ ಕೆ ನಾಮ್ (ನಿಮಗೆ ಶುಭಾಶಯಗಳು)" ಎಂದು ಹೇಳಿದ್ದಾರೆ.
"ಹಮಾರಿ ಭಿ ಆಪ್ಕೋ ರಾಮ್ ರಾಮ್ (ನಿಮಗೂ ನಮಸ್ಕಾರ)" ಎಂದು ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಒಂದೇ ದಿನ ಮಾರ್ಕ್ ಝುಕರ್ ಬರ್ಗ್ ರ 31 ಶತಕೋಟಿ ಡಾಲರ್ ಸಂಪತ್ತು ನಷ್ಟ !
एक दुआ-सलाम ~ तहज़ीब के नाम pic.twitter.com/dutvvEkz5W
— Akhilesh Yadav (@yadavakhilesh) February 3, 2022
हमारी भी आपको राम राम @jayantrld @yadavakhilesh pic.twitter.com/RyUmXS4Z8B
— Priyanka Gandhi Vadra (@priyankagandhi) February 3, 2022