ಬಾಲಕಿಗೆ ತಂದೆ, ಸಹೋದರ, ಅಜ್ಜ, ಮಾವನಿಂದ ಲೈಂಗಿಕ ಕಿರುಕುಳ : ಪೊಲೀಸ್
ಪುಣೆ, ಮಾ. 19: ಅಪ್ರಾಪ್ತ ಬಾಲಕಿಯೋರ್ವಳನ್ನು ಆಕೆಯ ತಂದೆ, ಸಹೋದರ, ಅಜ್ಜ ಹಾಗೂ ಮಾವ 5 ವರ್ಷಗಳ ಕಾಲ ಪ್ರತ್ಯೇಕ ಸಂದರ್ಭಗಳಲ್ಲಿ ಲೈಂಗಿಕ ಕಿರುಕುಳ ನೀಡಿದ ಘಟನೆ ಪುಣೆಯಲ್ಲಿ ನಡೆದಿದೆ. ಬಾಲಕಿಯ ತಂದೆ (45), ಸಹೋದರ ಹಾಗೂ ಅಜ್ಜ (60), ಮಾವ (25)ನ ವಿರುದ್ಧ ಭಾರತೀಯ ದಂಡ ಸಂಹಿತೆಯ ಅತ್ಯಾಚಾರ ಹಾಗೂ ಕಿರುಕುಳಕ್ಕಿರುವ ಸೆಕ್ಷನ್ಗಳ ಅಡಿಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಇದುವರೆಗೆ ಯಾರೊಬ್ಬರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರ ಮೂಲದ ಈ ಬಾಲಕಿಗೆ ಈಗ 11 ವರ್ಷ. ಆಕೆ ಹಾಗೂ ಆಕೆಯ ಕುಟುಂಬ ಪ್ರಸ್ತುತ ಪುಣೆಯಲ್ಲಿ ವಾಸಿಸುತ್ತಿದೆ. ಶಾಲೆಯಲ್ಲಿ ‘ಉತ್ತಮ ಸ್ಪರ್ಶ, ಕೆಟ್ಟ ಸ್ಪರ್ಶ’ದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುತ್ತಿರುವ ಸಂದರ್ಭ ಬಾಲಕಿ ಈ ವಿಚಾರ ತಿಳಿಸಿದ್ದಾಳೆ ಎಂದು ಪೊಲೀಸ್ ಇನ್ಸ್ಪೆಕ್ಟರ್ (ಅಪರಾಧ) ಅಶ್ವಿನಿ ಸತ್ಪುತೆ ಹೇಳಿದ್ದಾರೆ. ‘‘ಬಿಹಾರದಲ್ಲಿರುವಾಗ 2017ರಲ್ಲೇ ಬಾಲಕಿಗೆ ತಂದೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದ. ಹಿರಿಯ ಸಹೋದರ 2020 ನವೆಂಬರ್ನಲ್ಲಿ ಲೈಂಗಿಕ ದೌರ್ಜನ್ಯ ಎಸಗಲು ಆರಂಭಿಸಿದ್ದ. ಅಜ್ಜ ಹಾಗೂ ಮಾವ ಅನುಚಿತವಾಗಿ ಸ್ಪರ್ಶಿಸುತ್ತಿದ್ದರು’’ ಎಂದು ಅಶ್ವಿನಿ ಸತ್ಪುತೆ ಅವರು ತಿಳಿಸಿದ್ದಾರೆ.