ಮಧ್ಯಪ್ರದೇಶ: ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲನಿಂದ ಮಹಿಳೆಯ ಮೇಲೆ ಹಲ್ಲೆ
ಭೋಪಾಲ,ಮೇ 7: ಮಧ್ಯಪ್ರದೇಶದ ಶಹಡೋಲ ಜಿಲ್ಲೆಯ ಬೋಹರಿ ಪಟ್ಟಣದಲ್ಲಿಯ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲನೋರ್ವ ಮಹಿಳಾ ಕಕ್ಷಿದಾರಳ ಮೇಲೆ ಹಲ್ಲೆಗೈದಿರುವ ಘಟನೆ ನಡೆದಿದೆ.
ಆರೋಪಿ ನ್ಯಾಯವಾದಿ ಭಗವಾನ ಸಿಂಗ್ ಮಹಿಳೆಯಿಂದ ದೂರವಾಗಿರುವ ಪತಿಯ ವಕಾಲತ್ ವಹಿಸಿದ್ದು, ಗುರುವಾರ ಮಹಿಳೆ ತನ್ನ ಎಳೆಯ ಮಗುವಿನ ಜೊತೆಗೆ ವಿಚಾರಣೆಗೆ ಹಾಜರಾಗಲು ನ್ಯಾಯಾಲಯಕ್ಕೆ ಆಗಮಿಸಿದ್ದಳು.
ಸಿಂಗ್ ಮಹಿಳೆಯನ್ನು ಥಳಿಸುತ್ತಿರುವುದನ್ನು, ಜನರು ಅದನ್ನು ನೋಡುತ್ತ ನಿಂತಿದ್ದನ್ನು ಮತ್ತು ಮಗು ನೆಲದಲ್ಲಿ ಬಿದ್ದುಕೊಂಡು ಅಳುತ್ತಿರುವುದನ್ನು ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿರುವ ವೀಡಿಯೊ ತೋರಿಸಿದೆ.
ಸಿಂಗ್ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
Next Story