ರಾಜ್ಯಸಭಾ ಚುನಾವಣೆ: ಎಸ್ಪಿಯ ಜಾವೇದ್ ಅಲಿಖಾನ್ ನಾಮಪತ್ರ ಸಲ್ಲಿಕೆ
ಲಕ್ನೋ,ಮೇ 25: ಎಸ್ಪಿ ಅಭ್ಯರ್ಥಿ ಜಾವೇದ್ ಅಲಿಖಾನ್ ಅವರು ಬುಧವಾರ ರಾಜ್ಯಸಭಾ ಚುನಾವಣೆಗೆ ತನ್ನ ನಾಮಪತ್ರವನ್ನು ಸಲ್ಲಿಸಿದರು. ಅವರು 2014ರಿಂದ 2020ರವರೆಗೆ ರಾಜ್ಯಸಭೆಯಲ್ಲಿ ಎಸ್ಪಿಯನ್ನು ಪ್ರತಿನಿಧಿಸಿದ್ದರು.
ಇದಕ್ಕೂ ಮುನ್ನ ಬೆಳಿಗ್ಗೆ ಕಪಿಲ್ ಸಿಬಲ್ ಅವರು ಎಸ್ಪಿ ಬೆಂಬಲದೊಡನೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ಉತ್ತರ ಪ್ರದೇಶ ವಿಧಾನಸಭೆಯಲ್ಲಿ 273 ಶಾಸಕರನ್ನು ಹೊಂದಿರುವ ಬಿಜೆಪಿಗೆ ರಾಜ್ಯಸಭೆಗೆ ತನ್ನ ಎಂಟು ಸದಸ್ಯರ ಆಯ್ಕೆ ಸುಲಭವಾಗಿದೆ. 125 ಶಾಸಕರನ್ನು ಹೊಂದಿರುವ ಎಸ್ಪಿ ಮೈತ್ರಿಕೂಟಕ್ಕೆ ತನ್ನ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಧ್ಯವಿದೆ. ಎಸ್ಪಿ ತನ್ನ ತೃತೀಯ ಅಭ್ಯರ್ಥಿಯನ್ನು ಪ್ರಕಟಿಸಿಲ್ಲವಾದರೂ ಪಕ್ಷದ ವರಿಷ್ಠ ಅಖಿಲೇಶ ಯಾದವ ಅವರ ಪತ್ನಿ ಡಿಂಪಲ್ ಯಾದವ ತನ್ನ ನಾಮಪತ್ರವನ್ನು ಸಲ್ಲಿಸಲಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
Next Story