ಲಡಾಖ್ನಲ್ಲಿ ಕಣಿವೆಗೆ ಉರುಳಿದ ಸೇನಾ ವಾಹನ: 7 ಸೈನಿಕರು ಮೃತ್ಯು
ಸಾಂದರ್ಭಿಕ ಚಿತ್ರ
ಶ್ರೀನಗರ: ಲಡಾಖ್ನ ಶ್ಯೋಕ್ ನದಿ ಸಮೀಪ ಮಿಲಿಟರಿ ವಾಹನವೊಂದು ಸ್ಕಿಡ್ ಆಗಿ ಕಣಿವೆಗೆ ಉರುಳಿದ ಪರಿಣಾಮ ಏಳು ಸೈನಿಕರು ಮೃತಪಟ್ಟಿದ್ದಾರೆ. ಈ ವಾಹನದಲ್ಲಿ ಒಟ್ಟು 26 ಸೈನಿಕರಿದ್ದರು.
ಪರ್ತಾಪುರ್ ಎಂಬಲ್ಲಿನ ಟ್ರಾನ್ಸಿಟ್ ಕ್ಯಾಂಪಿನಿಂದ ಈ ವಾಹನವು ಸಬ್ ಸೆಕ್ಟರ್ ಹನೀಫ್ನತ್ತ ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿ ಸುಮಾರು 50 ರಿಂದ 60 ಅಡಿ ಆಳದ ಕಣಿವೆಗೆ ವಾಹನ ಉರುಳಿದೆ. ವಾಹನದಲ್ಲಿದ್ದ ಎಲ್ಲಾ ಸೈನಿಕರಿಗೂ ಗಾಯಗಳಾಗಿವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಗಾಯಾಳುಗಳನ್ನು ಪರ್ತಾಪುರ್ ಫೀಲ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story