ಪ್ರವಾದಿ, ಕುರ್ಆನ್ ಕುರಿತು ಟಿವಿ ಚರ್ಚೆಯಲ್ಲಿ ಅವಹೇಳನ: ಬಿಜೆಪಿ ವಕ್ತಾರೆ ವಿರುದ್ಧ ಕೇಸು ದಾಖಲಿಸಿದ ಸಾಕೇತ್ ಗೋಖಲೆ
ಹೊಸದಿಲ್ಲಿ: ಟೈಮ್ಸ್ ನೌ ವಾಹಿನಿಯ ನಾವಿಕಾ ಕುಮಾರ್ ನಿರೂಪಿಸುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಎಂಬಾಕೆ ಮುಸ್ಲಿಮರ ಪವಿತ್ರ ಗ್ರಂಥ ಕುರ್ಆನ್ ಮತ್ತು ಪ್ರವಾದಿಯವರನ್ನು ಅವಹೇಳಿಸುವ ಮಾತುಗಳನ್ನಾಡಿದ್ದು, ಈ ಬಗ್ಗೆ ಸಾಮಾಜಿಕ ತಾಣದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಅವರ ವಿರುದ್ಧ ಟಿಎಂಸಿ ಮುಖಂಡ ಹಾಗೂ ಆರ್ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿದ ಕುರಿತು ಸಾಮಾಜಿಕ ತಾಣದಲ್ಲಿ ಅವರು ಎಫ್ಐಆರ್ ಪ್ರತಿಯನ್ನು ಲಗತ್ತಿಸಿದ್ದಾರೆ. ಕೇವಲ ಸಾಕೇತ್ ಗೋಖಲೆ ಮಾತ್ರವಲ್ಲದೇ ಅಡ್ವೊಕೇಟ್ ಸೈಫ್ ಆಲಂ ಎಂಬವರು ಮುಂಬೈ ಪೊಲೀಸ್ ಮಹಾ ನಿರ್ದೇಶಕರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಈ ನಡುವೆ ವೀಡಿಯೋವನ್ನು ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಝುಬೈರ್ ತಿರುಚಿದ್ದಾರೆಂದು ನೂಪುರ್ ಆರೋಪಿಸಿದ್ದು, "ಪೂರ್ತಿ ವೀಡಿಯೋವನ್ನು ಈಗಾಗಲೇ ಡೌನ್ ಲೋಡ್ ಮಾಡಿಟ್ಟಿದ್ದೇವೆ. ಸಂಶಯವಿದ್ದಲ್ಲಿ ಪರಿಶೀಲಿಸಬಹುದು" ಎಂದು ಝುಬೈರ್ ಹೇಳಿದ್ದಾರೆ.
ದೇಶಾದ್ಯಂತ ಈ ವೀಡಿಯೊ ಕುರಿತು ಆಕ್ರೋಶ ವ್ಯಕ್ತವಾಗುತ್ತಿದ್ದು, ಕೂಡಲೇ ಬಿಜೆಪಿ ರಾಷ್ಟೃೀಯ ವಕ್ತಾರೆಯನ್ನು ಬಂಧಿಸಬೇಕೆಂದು ಹಲವರು ಆಗ್ರಹಿಸಿದ್ದಾರೆ.
Complaint has been filed with Chanakyapuri PS of @DelhiPolice against BJP's @NupurSharmaBJP for making extremely inflammatory & false comments on Holy Quran & Prophet Mohammed (PBUH) during a show on @TimesNow.
— Saket Gokhale (@SaketGokhale) May 28, 2022
Clear attempt to incite communal disharmony & she must be arrested. https://t.co/3biOedm4fh pic.twitter.com/Lp0VvWtXBV
We urge @CPMumbaiPolice @sanjayp_1 ji @Dwalsepatil @MumbaiPolice to take immediate action against BJP national spokesperson Nupur Sharma for her derogatory comments on Prophet Muhammad (PBUH) on a national television, we demand for her arrest such comments have agitated Muslims. https://t.co/GN6J4fNql0
— Advocate Saif Alam (@Advsaifalam) May 27, 2022
Prime Time debates in India have become a platform to encourage hate mongers to speak ill about other religions. @TimesNow's Anchor @navikakumar is encouraging a rabid communal hatemonger & a BJP Spokesperson to speak rubbish which can incite riots.
— Mohammed Zubair (@zoo_bear) May 27, 2022
Shame on you @vineetjaintimes pic.twitter.com/lrUlkHEJp5