ಅಗ್ನಿಪಥ್ ಯೋಜನೆ: ನೇಮಕಾತಿ ಅಧಿಸೂಚನೆ ಹೊರಡಿಸಿದ ಸೇನೆ; ಜುಲೈಯಿಂದ ಆನ್ಲೈನ್ ನೋಂದಣಿ ಆರಂಭ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ, ಜೂ. 20: ನೂತನವಾಗಿ ಘೋಷಿಸಲಾದ ಸೇನಾ ನೇಮಕಾತಿ ಯೋಜನೆ ‘ಅಗ್ನಿಪಥ್’ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಮುಂದುವರಿಯುತ್ತಿರುವ ನಡುವೆ ಭಾರತೀಯ ಸೇನೆ ಜೂನ್ 20ರಂದು ನೇಮಕಾತಿ ಅಧಿಸೂಚನೆ ಹೊರಡಿಸಿದೆ.
ಈ ಯೋಜನೆ ಅಡಿಯಲ್ಲಿ ಅಭ್ಯರ್ಥಿಗಳ ನೋಂದಣಿ ಜುಲೈಯಿಂದ ಆರಂಭವಾಗಲಿದೆ ಹಾಗೂ ವಿಶೇಷವಾಗಿ ರೂಪಿಸಲಾದ ಸೇನಾ ನೇಮಕಾತಿ ಕಚೇರಿ (ಎಆರ್ಒಗಳು)ಗಳು ಈ ಪ್ರಕ್ರಿಯೆಯನ್ನು ನಿರ್ವಹಿಸಲಿವೆ.
ಅಭ್ಯರ್ಥಿಗಳು ಸಾಮಾನ್ಯ ಕರ್ತವ್ಯ ಸೇರಿದಂತೆ ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟೆಕ್ನಿಕಲ್ (ವಾಯುಯಾನ/ಸ್ಫೋಟಕ ಪರಿವೀಕ್ಷಕ), ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್ಮ್ಯಾನ್ 10ನೇ ತರಗತಿ ಉತ್ತೀರ್ಣ ಹಾಗೂ ಅಗ್ನಿವೀರ್ ಟ್ರೇಡ್ಸಮ್ಯಾನ್ 8ನೇ ತರಗತಿ ಉತ್ತೀರ್ಣ -ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ನೋಂದಣಿ ಹಾಗೂ ನೇಮಕಾತಿ ಪ್ರಕ್ರಿಯೆಗೆ ಎಲ್ಲಾ ಅಭ್ಯರ್ಥಿಗಳು wwww.joinindianarmy.nic.in ಬಳಸಿ ಆನ್ಲೈನ್ ನೋಂದಣಿ ಮಾಡುವುದು ಕಡ್ಡಾಯವಾಗಿದೆ.
Next Story