ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 25 ರೂ. ಕಡಿತ
Photo:PTI
ಹೊಸದಿಲ್ಲಿ: ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ರಾಷ್ಟ್ರ ರಾಜಧಾನಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ commercial LPG cylinders ಬೆಲೆಯನ್ನು 25.50 ರೂ. ರಷ್ಟು ಕಡಿಮೆ ಮಾಡಿದೆ.
ಬೆಲೆಯಲ್ಲಿನ ಈ ಇತ್ತೀಚಿನ ಪರಿಷ್ಕರಣೆಯೊಂದಿಗೆ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆ ದಿಲ್ಲಿಯಲ್ಲಿ 1,885 ರೂ.ರ ಬದಲಿಗೆ 1,859.50 ರೂ. ಆಗಲಿದೆ.
ಕೋಲ್ಕತ್ತಾದಲ್ಲಿ 1,959 ರೂ. ಹಾಗೂ ಮುಂಬೈನಲ್ಲಿ 1811.50 ರೂ.ಕ್ಕೆ ಇಳಿಕೆಯಾಗಿದೆ.
ಸರಿಯಾಗಿ ಒಂದು ತಿಂಗಳ ನಂತರ ಬೆಲೆಯಲ್ಲಿ ಪರಿಷ್ಕರಣೆಯಾಗಿದೆ. ಸೆಪ್ಟೆಂಬರ್ 1 ರಂದು 19 ಕೆಜಿ ವಾಣಿಜ್ಯ ಸಿಲಿಂಡರ್ನ ಪ್ರತಿ ಯೂನಿಟ್ ಬೆಲೆಯನ್ನು 91.50 ರೂ ಕಡಿಮೆ ಮಾಡಲಾಗಿತ್ತು.
ಆಗಸ್ಟ್ 1 ರಂದು ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 36 ರೂ.ರಷ್ಟು ಕಡಿಮೆ ಮಾಡಲಾಗಿತ್ತು.
ಆದಾಗ್ಯೂ, ದೇಶೀಯ ಸಿಲಿಂಡರ್ಗಳ ಬೆಲೆಗಳು ಸ್ಥಿರ ವಾಗಿದೆ. ಜುಲೈ 6 ರಂದು 14.2 ಕೆಜಿ ತೂಕದ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಪ್ರತಿ ಯೂನಿಟ್ಗೆ 50 ರೂ. ಹೆಚ್ಚಿಸಲಾಗಿತ್ತು. ಈ ಹಿಂದೆ, ಗೃಹಬಳಕೆಯ ಸಿಲಿಂಡರ್ಗಳ ಬೆಲೆಯನ್ನು ಮೇ 19, 2022 ರಂದು ಪರಿಷ್ಕರಿಸಲಾಗಿತ್ತು.