ಐಸಿಐಸಿಐ ಬ್ಯಾಂಕ್ನಿಂದ 12 ಕೋ.ರೂ. ದರೋಡೆ: 2 ತಿಂಗಳ ಬಳಿಕ ಪ್ರಧಾನ ಆರೋಪಿ ಬಂಧನ
ಮುಂಬೈ, ಅ. 5: ಥಾಣೆಯ ಮಂಡಪ ಪ್ರದೇಶದಲ್ಲಿರುವ ಐಸಿಐಸಿಐ ಬ್ಯಾಂಕ್ನಿಂದ 12 ಕೋ.ರೂ. ದರೋಡೆಗೈದ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಧಾನ ಆರೋಪಿಯನ್ನು ಎರಡೂವರೆ ತಿಂಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.
ಅಲ್ತಾಫ್ ಶೇಖ್ (43) ಎಂದು ಗುರುತಿಸಲಾದ ಪ್ರಧಾನ ಆರೋಪಿಯಿಂದ ಸುಮಾರು 9 ಕೋ.ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೇಖ್ನನ್ನು ಸೋಮವಾರ ಬಂಧಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿ ಈತನ ಸಹೋದರಿ ನಿಲೋಫರ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದರೋಡೆ ಜುಲೈ 12ರಂದು ನಡೆದಿತ್ತು.
Next Story